ಪ್ರಜಾ ವೀಕ್ಷಣೆ ಸುದ್ದಿ :
LOCAL BREAKING : ಕುಕನೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ರೌಡಿ ವರ್ತನೆ : ಗುಂಗಾಡಿ ಶರಣಪ್ಪ
ಕುಕನೂರು : ‘ಕುಕನೂರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ವರ್ತನೆ ಸರಿ ಇಲ್ಲ. ಇವರು ರೌಡಿ ಅಂತೆ ವರ್ತನೆ ಮಾಡುತ್ತಿದ್ದು, ಇಲ್ಲಿನ ಶಾಸಕರ ಕುಮ್ಮಕ್ಕಿನಿಂದ ಜನಸಾಮಾನ್ಯರು ಹಾಗೂ ರೈತರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ’ ಎಂದು ಬಿಜೆಪಿ ಮುಖಂಡ ಹಾಗೂ ರೈತಪರ ಹೋರಾಟಗಾರ ಗುಂಗಾಡಿ ಶರಣಪ್ಪ ಆರೋಪಿಸಿದ್ದಾರೆ.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಈ ಖಾಸಗಿ ವಿದ್ಯುತ್ ಉತ್ಪಾದನೆ ಮಾಡುವಂತಹ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಭರವಸೆಗಳನ್ನ ನೀಡಿ, ರೈತರ ಭೂಮಿಯನ್ನು ಕಬಳಿಸುತ್ತಿದ್ದಾರೆ. ಈ ಭಾಗದಲ್ಲಿ ಬರೋಬ್ಬರಿ 1000 ಕೋಟಿ ರೂ. ಅವ್ಯವ್ಯವಹಾರ ನಡೆದಿದೆ ಇದಕ್ಕೆ ಮುಂದಿನ ದಿನದಲ್ಲಿ ಸೂಕ್ತದಾಖಲೆಗಳೊಂದಿಗೆ ದೊಡ್ಡಮಟ್ಟದ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಇತ್ತೀಚಿಗೆ ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಸ್ಥಳೀಯ ರೈತರು ಹಾಗೂ ಸರೆಂಟಿಕಾ ವಿಂಡ್ ಫ್ಯಾನ್ ಕಂಪನಿಯವರ ಜೊತೆ ಮಾತಿನ ಚಕಮಕಿ ನಡೆಯುವ ವೇಳೆ ಸಿಪಿಐ ಮೌನೇಶ್ವರ ಪಾಟೀಲ್ ಹಾಗೂ ಕುಕುನೂರು ಪಿಎಸ್ಐ ಗುರುರಾಜ್ ಟಿ ಮಧ್ಯಸ್ಥಿಕೆ ವಹಿಸಿದ್ದು, ಈ ವೇಳೆ ರೈತ ಪರ ಹೋರಾಟಗಾರ ಗುಂಗಾಡಿ ಶರಣಪ್ಪ ಹಾಗೂ ಪಿಎಸ್ಐ ಟಿ. ಗುರುರಾಜ ಅವರ ನಡುವೆ ವಾಗ್ವಾದ ವಾಗಿ, ತೀವ್ರ ಹಂತಕ್ಕೆ ಹೋಗಿ ಗುಂಗಾಡಿ ಶರಣಪ್ಪವರನ್ನು ಬಂಧಿಸಲಾಯಿತು.
‘ಈ ಭಾಗದ ರೈತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಈ ಸರೆಂಟಿಕಾ ವಿಂಡ್ ಫ್ಯಾನ್ ಕಡೆಯಿಂದ ಇಲ್ಲಿನ ಅಧಿಕಾರಿಗಳಿಗೆ ಮಾಮೂಲು ಹೋಗುತ್ತಿದ್ದು, ರೈತರ ಮೇಲೆ ಶಾಸಕರ ಬೆಂಬಲ ಪಡೆದ ಪೊಲೀಸ್ ಅಧಿಕಾರಿಗಳಿಂದ ನಿರಂತರ ದೌರ್ಜನಗಳ ನಡೆಯುತ್ತಿದೆ’ ಎಂದರು.
‘ನನ್ನ ಮೇಲೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ನನ್ನನ್ನು 8 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ನಂತರ ಕೋರ್ಟಿಗೆ ಕಳಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಪಕ್ಷದ ಹಿರಿಯ ನಾಯಕರು ನನ್ನನ್ನು ಸಂಪರ್ಕಿಸಿ, ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ನನಗೆ ಅಭಯ ನೀಡಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಜಿಲ್ಲಾ ಬಿಜೆಪಿ ಘಟಕವು ರೈತರ ಪರ ಹೋರಾಟ ಮಾಡಲಾಗುವುದು ಎಂದರು.
“ಸಮಾಜದಲ್ಲಿ ಅಶಾಂತಿ ಹಾಗೂ ಹೋರಾಟಗಾರರ ಮುಖವಾಡ ಧರಿಸಿ ನಕಲಿ ಹೋರಾಟ ಮಾಡುವವರಿಗೆ ಹಾಗೂ ರೌಡಿ ವರ್ತನೆ ತೋರಿಸುವವರಿಗೆ ನಾನು ಕೂಡ ರೌಡಿ ವರ್ತನೆಯನ್ನೇ ತೋರಿಸಬೇಕಾಗುತ್ತದೆ“
