ಶಿವಪುರ, ಗುಳದಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಪರಿಶೀಲನೆ
ಕೊಪ್ಪಳ: ತಾಲೂಕಿನ ಗುಳದಳ್ಳಿ ಹಾಗು ಶಿವಪುರ ಗ್ರಾಮಗಳಲ್ಲಿ ವಾಂತಿಬೇಧಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕುರಿತು ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೆ* ಮನೆ ಮನೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಗ್ರಾ.ಪಂಯಿಂದ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಗ್ರಾ.ಪಂ ಪಿಡಿಒಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪಲೈನ್ ಒಡೆದು ಕಲುಷಿತ ಕುಡಿಯುವ ನೀರು ಸರಬರಾಜು ಆಗದಂತೆ ಕ್ರಮವಹಿಸಿರಿ. ಸುರಕ್ಷತಾ ಕ್ರಮ ಕೈಗೊಳ್ಖಲು ನಿರ್ದೇಶಿಸಿದರು. ಗುಳದಳ್ಳಿ ಗ್ರಾಮದಲ್ಲಿ 24 ಪ್ರಕರಣಗಳಲ್ಲಿ 24 ಜನರು ಸಂಪೂರ್ಣ ಗುಣಮುಖರಾಗಿರುವ ಬಗ್ಗೆ ಗ್ರಾ.ಪಂ&ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾನ್ಯ ಯೋಜನಾ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಆರೋಗ್ಯಾಧಿಕಾರಿ, ಕುಡಿಯುವ ನೀರು& ನೈರ್ಮಲ್ಯ ಇಲಾಖೆಯ ಸಿಬ್ಬಂದಿಗಳು, ಗುಳದಳ್ಳಿ & ಶಿವಪುರ ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳು, ಗ್ರಾಮಸ್ಥರು, ವೈದ್ಯಾಧಿಕಾರಿಗಳು,ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.