LOCAL NEWS : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಗೌರಾ ಬಸವರಾಜ ಆಯ್ಕೆ : ಬಂಜಾರ ಸಮಾಜದ ಯುವಕರಿಂದ ಸನ್ಮಾನ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರ, ಫೆ. 27 : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಗೌರಾ ಅವರನ್ನು ತಾಲೂಕಿನ ಬಂಜಾರ ಸಮುದಾಯದವರು ಶುಕ್ರವಾರ ಸನ್ಮಾನಿಸಿ ಅಭಿನಂದಿಸಿದರು.
ಕುಕನೂರಿನ ಗೌರಾ ಗ್ರಾನೈಟ್‌ನ ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ತಮ್ಮನ್ನು ಗುರುತಿಸಿ ಈ ಜವಾಬ್ದಾರಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ನಾಯಕರು ಹಾಗೂ ಕಾರ್ಯಕರ್ತರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಪಕ್ಷ ಬಲವರ್ಧನೆಗೆ ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುವುದಾಗಿ ತಿಳಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಅವರು , ಮಾಜಿ ಸಚಿವ ಹಾಲಪ್ಪ ಆಚಾರ ಹಾಗೂ ಬಸವರಾಜ ಗೌರಾ ಅವರು ಬಂಜಾರ ಸಮುದಾಯದ ಮೇಲಿನ ಕಾಳಜಿ ಮತ್ತು ಅಭಿಮಾನ ಹೊಂದಿದ್ದಾರೆ ಎಂದು ಹೇಳಿದರು.
ಗೌರಾ ಅವರ ಆಯ್ಕೆ ಸಮುದಾಯಕ್ಕೆ ಸಂತಸ ತಂದಿದ್ದು, ಅವರು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಬಳಿಗೇರಿ, ರಾಘವೇಂದ್ರ ಬಳಿಗೇರಿ, ಸೋಮಪ್ಪ ಕಾರಭಾರಿ, ದುರಗಪ್ಪ ಕಟ್ಟಿಮನಿ, ನಾಗರಾಜ ಭಾನಾಪುರ, ಹನಮಂತ ಚವ್ಹಾಣ, ಶಿವು ಮಾರನಾಳ, ಮಹೇಶ ಕಾರಭಾರಿ, ಶಶಿಕುಮಾರ ಕಾರಭಾರಿ, ವಿಜಯ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.