BREAKING : “ಜಿಲ್ಲೆಯಲ್ಲಿ ಬರೋಬ್ಬರಿ 600 ಎಕರೆ ಸರ್ಕಾರಿ ಭೂಮಿ ಕಬಳಿಕೆ” : ಶಾಸಕ ರಾಯರೆಡ್ಡಿ!!

You are currently viewing BREAKING : “ಜಿಲ್ಲೆಯಲ್ಲಿ ಬರೋಬ್ಬರಿ 600 ಎಕರೆ ಸರ್ಕಾರಿ ಭೂಮಿ ಕಬಳಿಕೆ” : ಶಾಸಕ ರಾಯರೆಡ್ಡಿ!!

ಪ್ರಜಾ ವೀಕ್ಷಣೆ ಸುದ್ದಿ : 

BREAKING : ಜಿಲ್ಲೆಯಲ್ಲಿ 600 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಕೆ : ಶಾಸಕ ರಾಯರೆಡ್ಡಿ ಸ್ಪೋಟಕ ಹೇಳಿಕೆ!!

ಕುಕನೂರು : ‘ಈ ಭಾಗದಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆಯಲ್ಲೇ ಸುಮಾರು 600 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಮಠ-ಮಂದಿರ, ಮಸಿದಿಗಳ ಜಮೀನನ್ನು ಕಬಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಸ್ಪೋಟಕ ಹೇಳಿಕೆ ನೀಡಿದರು.

ನಿಂಗಾಪುರ ಗ್ರಾಮದಲ್ಲಿ “ಬುದ್ದ ಬಸವ ಅಂಬೇಡ್ಕರ್ ಭವನ”ದ ಶಂಕು ಸ್ಥಾಪನೆ ಮಾಡಿದ ಶಾಸಕ ಬಸವರಾಜ ರಾಯರೆಡ್ಡಿ

ಇಂದು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ “ಬುದ್ದ ಬಸವ ಅಂಬೇಡ್ಕರ್ ಭವನ”ದ ಶಂಕು ಸ್ಥಾಪನೆ ಶಾಸಕ ಬಸವರಾಜ ರಾಯರೆಡ್ಡಿ ನೆರವೇರಿಸಿದರು. ಈ ವೇಳೆಯಲ್ಲಿ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ‘ಇದಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ಕೂಡ ಸಾತ್ ನೀಡುತ್ತಿದ್ದು, ಈ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಂತಹ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರಿ ಜಮೀನು, ದೇವಸ್ಥಾನಗಳ ಜಮೀನು ಮಸೀದಿಗಳ ಜಮೀನು ದುರುಪಯೋಗಪಡಿಸಿಕೊಳ್ಳುವುದಕ್ಕೆ ನಾನು ಬಿಡುವುದಿಲ್ಲ, ಅಧಿಕಾರದಲ್ಲಿರುವಂತಹ ರಾಜಕಾರಣಿಗಳು ಇದಕ್ಕೆ ಬೆಂಬಲವನ್ನ ಕೊಡಬಾರದು. ಹಾಗಾಗಿ ನಾನು ಇದರ ವಿರುದ್ಧ ನಿರಂತರವಾಗಿ ಧ್ವನಿ ಎತ್ತೆ ಎತ್ತುತ್ತೇನೆ. ಸರ್ಕಾರಕ್ಕೆ ಸಂಬಂಧಿಸಿದಂತಹ ಕಿಂಚಿತ್ತು ಜಮೀನನ್ನು ಕೂಡ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಕಬಳಿಸುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

Leave a Reply

error: Content is protected !!