ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ..
ಮುದಗಲ್ಲ :-ಇಂದು, ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂ ಸಮುದಾಯದವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ವಖ್ಫ್ ಬೋರ್ಡ್ ಬಿಲ್ ವಿರುದ್ಧ ಮಾನವ ಸರಪಳಿ ಕಾರ್ಯಕ್ರಮವನ್ನು ನೂರ್ ಏ ಇಲಾಹಿ ಮಸ್ಜಿದ್ ಜಮಾತ್ ಎ ಇಸ್ಲಾಮಿಕ್ ಹಿಂದ್, ಮುದಗಲ್ಲ ಪಟ್ಟಣದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಮೌಲಾನಾ ಅನ್ವರ್ ಪಾಷ ಅವರು ಈ ಸಂದರ್ಭದಲ್ಲಿ ಮಾತನಾಡಿ
ಕೇಂದ್ರ ಸರ್ಕಾರ ತಂದಿರುವ 2025ರ ವಕ್ಸ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ಮಾಡಿಕೊಂಡು ಬಂದಿದೆ. ಇದರ
ಬೆಂಬಲವಾಗಿ 2025, ಜುಲೈ 4 ರಂದು ಶುಕ್ರವಾರ ಪ್ರಾರ್ಥನೆ
ನಂತರ ರಾಷ್ಟ್ರ ವ್ಯಾಪಿ ಮಾನವ ಸರಪಳಿ ನಿರ್ಮಿಸಿ ಹೋರಾಟಕ್ಕೆ
ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ನೂರ್ ಏ ಇಲಾಹಿ ಮಸ್ಜಿದ್ ಜಮಾತ್ ಎ ಇಸ್ಲಾಮಿಕ್ ಹಿಂದ್, ಮುದಗಲ್ಲ ವತಿಯಿಂದ
ಕೇಂದ್ರದ ವಕ್ಸ್ ತಿದ್ದುಪಡಿ ಮಸೂದೆ ವಿರೋಧಿಸಿ, ಕಾಯ್ದೆ
ಹಿಂಪಡೆಯಲು ಒತ್ತಾಯಿಸಿ ಮುದಗಲ್ಲಯಲ್ಲಿ ಮಾನವ
ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ವಕ್ಸ್ ಆಸ್ತಿ ನಮ್ಮ ಪೂರ್ವಜರು, ಹಿರಿಯರು ಅಲ್ಲಾಹನನ್ನು
ಸಂತೃಪ್ತಪಡಿಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ
ಮಾಡಿದ ಜಮೀನಾಗಿದೆ. ವಕ್ಸ್‌ಗೆ ಸೇರಿರುವ ಜಮೀನುಗಳು
ಯಾರಿಂದಲೋ ಕಬಳಿಸಿದ ಜಮೀನಲ್ಲ ಯಾರಿಂದಲೋ
ಕಬಳಿಸಿದ ಜಮೀನು ವಕ್ಸ್ ಆಗಲು ಸಾಧ್ಯವೂ ಇಲ್ಲ. ಧರ್ಮದ
ಗೋಡೆಯನ್ನು ಬದಿಗಿಟ್ಟು ಎಲ್ಲಾ ಭಾರತೀಯರು ಹೋರಾಟದ
ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.
“ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ.
ಮುದಗಲ್ಲಯಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟ
ಮಾಡುತ್ತೇವೆ. ಮುಸ್ಲಿಂರ ಹೋರಾಟವನ್ನು ಅರಿತು ಕೇಂದ್ರ
ಸರ್ಕಾರ ಜಾರಿಗೆ ತಂದಿರುವ, ಮಾರಕ ವಕ್ಸ್ ತಿದ್ದುಪಡಿ ಕಾಯ್ದೆ
2025ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಲಯ ಸಂಚಾಲಕರಾದ ಮೌಲನಾ ಅನ್ವರ್ ಪಾಷಾ ಉಮರಿ ,ಲಾಲಾ ಹುಸೇನ್ ಸಾಬ ಇಲಕಲ್ಲ, ಮೋಹಿಯುದ್ದಿನ್ ,ಆದಂ ಸಾಬ್ ತಂಬಾಕ್,
ದಾವೂದ ಸಾಬ ಕೋರಿ,ಹಾಜಿಫ್ ಮೂಜಿಬುರ್ ರಹಮಾನ್,
ಫಾರೂಕ್ ಅರಬ್, ಮಹೇಬೂಬ್ ಅರಗಂಜಿ, ಇಸ್ಮಾಯಿಲ್ ಸಾಬ,
ಮನಜೂರ್ ಫಿಟ್ನೆಸ್, ಉಪಸ್ಥಿತರಿದ್ದರು.