You are currently viewing ಮುದಗಲ್ಲ| ಒಂಟೆ ಸವಾರಿ: ಸಂಭ್ರಮಿಸಿದ ಮಕ್ಕಳು…

ಮುದಗಲ್ಲ| ಒಂಟೆ ಸವಾರಿ: ಸಂಭ್ರಮಿಸಿದ ಮಕ್ಕಳು…

ಮುದಗಲ್ಲ| ಒಂಟೆ ಸವಾರಿ: ಸಂಭ್ರಮಿಸಿದ ಮಕ್ಕಳು…

ಮುದಗಲ್ಲ: ಚಲನಚಿತ್ರಗಳಲ್ಲಿ ನೋಡುತ್ತಿದ್ದ ಮರುಳುಗಾಡಿನ
ಒಂಟೆಗಳನ್ನು ಮುದಗಲ್ಲ ಪಟ್ಟಣದಲ್ಲಿ ಕಂಡ ಪುಟಾಣಿಗಳು ಸವಾರಿ ಮಾಡುವ ಮೂಲಕ ಸಂಭ್ರಮಿಸಿದರು.

ಸೋಮವಾರ ಪಟ್ಟಣಕ್ಕೆ ಬಂದಿದ್ದ ಒಂಟೆಗಳನ್ನು ನೋಡಲು ಚಿಣ್ಣರು, ದೊಡ್ಡವರು ಮುಗಿಬಿದ್ದರು. ಚಿಕ್ಕಮಕ್ಕಳ ಒಂದು ಸುತ್ತಿನ ಸವಾರಿಗೆ ಮಾಲೀಕರು 30 ನಿಗದಿಪಡಿಸಿದ್ದರು.

ಒಂಟೆ ಮಾಲೀಕರಾದ ಮಹಾರಾಷ್ಟ್ರದ ಅವರು ಪುಣೆಯಿಂದ ಬಂದಿದ್ದು, ಅವರ ಪೂರ್ವಜರಿಂದಲೂ ಬಂದ ಒಂಟೆಯೊಂದಿಗೆ ಅಲೆಯುವ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.

ಪ್ರತಿವರ್ಷ ಪುಣೆಯಿಂದ ಆರಂಭವಾಗುವ ಪ್ರಯಾಣ ಸೊಲ್ಲಾಪುರ,ಬಾಗಲಕೋಟೆ, ಇಳಕಲ್ಲ, ಬದಾಮಿ, ರೋಣ, ಗದಗ, ಹುಬ್ಬಳ್ಳಿ ಸೇರಿದಂತೆ ಎಲ್ಲ ಕಡೆ ಸಂಚರಿಸುವುದಾಗಿ ಹೇಳಿದರು.

ಮುದಗಲ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇನ್ನೇರಡು ದಿನ ಒಂಟೆ ಸವಾರಿ ಮಾಡಿಸಿ ಮತ್ತೆ ಮುಂದಿನ ಪಟ್ಟಣಕ್ಕೆ ತೆರಳುವುದಾಗಿ ಹೇಳಿದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!