ಮುದಗಲ್ಲ ವರದಿ..
ಮುದಗಲ್ಲ :- ಬಸವಣ್ಣನವರ ಅವಹೇಳನಕಾರಿ ಪುಸ್ತಕದ ವಿರುದ್ಧ ಪ್ರತಿಭಟನೆ..
ಮುದಗಲ್ಲ :- ಪುರಸಭೆ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು
ಬರಹಗಾರ ರವಿ ಹಂಜಗಿಮಠ ಎಂದೂ ಕರೆಯಲ್ಪಡುವ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು ಪಂಚಮಸಾಲಿ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷರು,ವೀರಶೈವ ಲಿಂಗಾಯತ ಸಮಾಜ ವತಿಯಿಂದ ಅಧ್ಯಕ್ಷರು,ಸದಸ್ಯರು ಮತ್ತು ಇತರ ಕೆಲವು ಸಂಘಟನೆ ಗಳು ಪಟ್ಟಣದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ನಾಡ ಕಚೇರಿಯ ಉಪತಹಶೀಲ್ದಾರ್ ತುಳಜಾರಾಮ ಸಿಂಗ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪಂಚಮಸಾಲಿ ಸಮಾಜ ಸಂಘದ ಅಧ್ಯಕ್ಷರಾದ ಮಹಾಂತೇಶ ಪಾಟೀಲ್ ಮಾತನಾಡಿ ಬಸವಣ್ಣ ಮತ್ತು ಇತರ ಶರಣರ ವಿರುದ್ಧ ಅವಹೇಳನಕಾರಿ
ಪದಗಳನ್ನು ಬಳಸಿದ್ದಕ್ಕಾಗಿ ಬರಹಗಾರ ಮತ್ತು ಪ್ರಕಾಶಕರ
ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ.
“ರಾಜ್ಯ ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ
ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.
ಅಂತಹ ನಾಯಕನನ್ನು ಅವಮಾನಿಸುವುದು ಇಡೀ ರಾಜ್ಯಕ್ಕೆ ಮಾಡಿದ ಅವಮಾನ. ಬಸವಣ್ಣ ಇಡೀ ಜಗತ್ತಿಗೆ ಜ್ಞಾನೋದಯದ ಮಾರ್ಗವನ್ನು ತೋರಿಸಿದ ವಿಶ್ವ ನಾಯಕ. ಅಂತಹ ನಾಯಕ ಮತ್ತು ಅವರ ಅನುಯಾಯಿಗಳಿಗೆ ಯಾವುದೇ
ಅವಮಾನಗಳನ್ನು ನಾವು ಸಹಿಸುವುದಿಲ್ಲ” ಎಂದು
ಹೇಳಿದರು.
ಈ ಸಂದರ್ಭದಲ್ಲಿ ಸುರೇಂದ್ರ ಗೌಡ ಪಾಟೀಲ್, ಮಲ್ಲಪ್ಪ ಮಾಟೂರು, ಮಲ್ಲಪ್ಪ ಹೂಗಾರ,ಗುಂಡಪ್ಪ ಗಂಗಾವತಿ
ಶಿವರಾಜ ತಳವಾರ್,ರುದ್ರಗೌಡ ಆಮದಿಹಾಳ, ಮಹೇಶ ವಸ್ತ್ರದ,ನಿಂಗಪ್ಪ ಹಣಗಿ,ಶರಣಪ್ಪ ಮಡಿವಾಳ, ವೆಂಕಟೇಶ್ ಹಿರೇಮನಿ,ಶರಣಗೌಡ ಮೇದಲಾಪೂರ, ಅಮರೇಶ ಅಂಗಡಿ,ಶಂಕರ್ ಮಾಟೂರ, ಮಹಾಂತೇಶ್,ಮಂಜುನಾಥ ನಂದವಾಡಗಿ,ಇತರರು ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ
