ಮುದಗಲ್ಲ | ಘನತೆ ಜೀವನ ಕಟ್ಟಿಕೊಟ್ಟ ಸಂವಿಧಾನ : ಶರಣಪ್ಪ ಕಟ್ಟಿಮನಿ..

ಮುದಗಲ್ಲ | ಘನತೆ ಜೀವನ ಕಟ್ಟಿಕೊಟ್ಟ ಸಂವಿಧಾನ : ಶರಣಪ್ಪ ಕಟ್ಟಿಮನಿ..

ಮುದಗಲ್ಲ :-ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮ ಫಲಕ ಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಂವಿಧಾನ ಪೀಠಿಕೆಗಳನ್ನು ಓದುವ ಮೂಲಕ ಹಬ್ಬದ ವಾತಾವರಣದಲ್ಲಿ ಸಂವಿಧಾನ ದಿನವನ್ನು ಆಚರಿಸಿದರು..

ನಮ್ಮ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಸಂವಿಧಾನವು ಎತ್ತಿಹಿಡಿದಿದೆ. ಜೊತೆಗೆ, ನಮಗೆಲ್ಲರಿಗೂ ಸಾರ್ವತ್ರಿಕ ಮತದಾನದ ಹಕ್ಕು ನೀಡಿದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಯಾವ ರೀತಿ ನಡೆಯಬೇಕು ? ಎಂಬುದನ್ನು ಸಂವಿಧಾನ ತಿಳಿಸಿದೆ. ಹಲವು ದೇಶಗಳ ಸಂವಿಧಾನ, 16 ವರ್ಷದಿಂದ 17 ವರ್ಷಗಳು ಮಾತ್ರ ಜಾರಿಯಲ್ಲಿದ್ದವು. ಆದರೆ, ನಮ್ಮ ಭಾರತದ ಸಂವಿಧಾನ 76 ವರ್ಷ ಕಳೆದರೂ ಗಟ್ಟಿತನ, ಸದೃಢತೆಯನ್ನು ಉಳಿಸಿಕೊಂಡಿದೆ. ಪ್ರತಿಯೊಬ್ಬರೂ ಸಂವಿಧಾನ ಓದಿ, ತಿಳಿದುಕೊಳ್ಳಬೇಕು. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ಎಂದರು.

ಈ ಸಂದರ್ಭದಲ್ಲಿ :- ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಘಟಕದ ಅಧ್ಯಕ್ಷರಾದ ಬಸವರಾಜ ಬಂಕದಮನೆ,ಹಾಗೂ ಕೃಷ್ಣ ಚಲುವಾದಿ, ಹನುಮಂತ ಡಕಲರ್, ಮೌನಪ್ಪ ಕಟ್ಟಿಮನಿ,ಮಜೀದ್, ರಾಜು, ಮಹಾಂತೇಶ, ಇತರರು ಉಪಸ್ಥಿತರಿದ್ದರು..

ವರದಿ:-ಮಂಜುನಾಥ ಕುಂಬಾರ

 

Leave a Reply

error: Content is protected !!