Post Views: 125
ಮುದಗಲ್ಲ ವರದಿ..
ನ. 24 ರಂದು 850 ಅಡಿ ಧ್ವಜಾ ಅದ್ದೂರಿ ಮೆರವಣಿಗೆ’ ಎಸ್.ಎ. ನಯೀಮ್ ..
ಮುದಗಲ್: 71 ನೇ ರಾಜ್ಯೋತ್ಸವದ ನಿಮಿತ್ತ 850 ಅಡಿ ಧ್ವಜಾ ಮೆರವಣಿಗೆ’ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿ ಮಾನ ಸೇನೆ ಮುದಗಲ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ನಹಿಂ ಹೇಳಿದರು.

ಪಟ್ಟಣದಲ್ಲಿ ಪತ್ರಿಕೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ 18 ವರ್ಷಗಳಿಂದ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ವಿವಿಧ ರಕ್ಷಣೆಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ವರ್ಷ ರಾಜ್ಯೋತ್ಸವ ಅಂಗವಾಗಿ ನ. 24 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅಭಿಮಾನ ಬೆಳೆಸುವ ಉದ್ದೇಶದಿಂದ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಹಾಗೂ ಎಂಟು ನೂರ ಐವತ್ತು ಅಡಿ (850) ಕನ್ನಡ ಬಾವುಟದ ಮೆರವಣಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಲಿಂಗಸೂಗೂರು ರಸ್ತೆಯ ಸೀಕ್ರೆಟ್ ಹಾರ್ಟ್ಸ್ ಅಂಗ್ಲ ಮಾಧ್ಯಮ ಶಾಲೆಯ ಮೈದಾನದಿಂದ ಪುರಸಭೆಯ ರಂಗಮಂದಿರದ ವರಿಗೆ ಕನ್ನಡ ಧ್ವಜ ಮೆರವಣಿಗೆ ನಡೆಯಲಿದೆ.
ಡಾ!! ಶಶಿಕಲಾ ಭೋವಿ ಜಿಲ್ಲಾ ಅಧ್ಯಕ್ಷರು ಜನ ಜಾಗೃತಿ ವೇದಿಕೆ
ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಧ್ವಜಾರೋಹಣವನ್ನು ದೊಡ್ಡನಗೌಡ ಪಾಟೀಲ್ ಲೆಕ್ಕಿಹಾಳ ಮಾಜಿ ಶಾಸಕರು ಹುನಗುಂದ ಅವರು ನೆರವೇರಿಸಲಿದ್ದಾರೆ.

ಮುದಗಲ್ ಪಟ್ಟಣದ ಕನ್ನಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಕರವೇ ಪದಾಧಿಕಾರಿ ಗಳಾದ ,ಎಸ್ ಎನ್ ಖಾದ್ರಿ, ಸಾಬು ಹುಸೇನ್, ಮೖಬು ಸಾಬ ಕಡ್ಡಿಪುಡಿ, ಇಸ್ಮಾಯಿಲ್ ಬಳಿಗಾರ , ಮಹಾಂತೇಶ ಚಟ್ಟರ್ , ಇಮಾಮ ಹುಸೇನ್ ತಮಾಟಾ, ಬಾಲಪ್ಪ, ಜಮಾಲಿಸಾಬ,ರಾಯಪ್ಪ, ಹನೀಪ್ ಖಾನ್ , ಭಿಮಣ್ಣ, ಅಬ್ದುಲ್ ಮಜೀದ್, ಇಸ್ಮಾಯಿಲ್ ಕೊಳ್ಳಿ, ಜಮೀರ್ ಮೇಸ್ತ್ರಿ, ಅವೇಜ್ ಮುನ್ನ, ಇತರರು ಉಪಸ್ಥಿತರಿದ್ದರು.
ವರದಿ:-ಮಂಜುನಾಥ ಕುಂಬಾರ