You are currently viewing BIG NEWS : ಸಾರ್ವಜನಿಕ ದೂರುಗಳಿಗೆ ಇನ್ಮುಂದೆ 21 ದಿನಗಳ ಗಡುವು! : ವಿಳಂಬ ಮಾಡಿದ ಅಧಿಕಾರಿಗಳಿಗೆ ₹1,500 ದಂಡ!!

BIG NEWS : ಸಾರ್ವಜನಿಕ ದೂರುಗಳಿಗೆ ಇನ್ಮುಂದೆ 21 ದಿನಗಳ ಗಡುವು! : ವಿಳಂಬ ಮಾಡಿದ ಅಧಿಕಾರಿಗಳಿಗೆ ₹1,500 ದಂಡ!!

BIG NEWS : ಸಾರ್ವಜನಿಕ ದೂರುಗಳಿಗೆ ಇನ್ಮುಂದೆ 21 ದಿನಗಳ ಗಡುವು! : ವಿಳಂಬ ಮಾಡಿದ ಅಧಿಕಾರಿಗಳಿಗೆ ₹1,500 ದಂಡ!!

ಸಕಾಲ ಕಾಯ್ದೆಯಡಿ ಸಾರ್ವಜನಿಕ ದೂರುಗಳ ವಿಲೇವಾರಿ – ಪ್ರಜಾಸೇವಾ ಪೋರ್ಟಲ್, 1902 ಸಹಾಯವಾಣಿ, ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣದ ದೂರುಗಳಿಗೂ ಅನ್ವಯ!

PV NEWS ಕನ್ನಡ 24×7

ಬೆಂಗಳೂರು, ನ 21: ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕ ದೂರುಗಳನ್ನು ಸಕಾಲ ಕಾಯ್ದೆಯ ವ್ಯಾಪ್ತಿಗೆ ತಂದಿದೆ. ಪ್ರಜಾಸೇವಾ ಪೋರ್ಟಲ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಸಲ್ಲಿಕೆಯಾಗುವ ದೂರುಗಳ ಇತ್ಯರ್ಥಕ್ಕೆ ನಿಗದಿತ ಕಾಲಮಿತಿ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಹೊಸ ಅಧಿಸೂಚನೆ ಜಾರಿಗೊಂಡಿದ್ದು, ತಕ್ಷಣದಿಂದಲೇ ಅನ್ವಯವಾಗಲಿದೆ. ಪ್ರಜಾಸೇವಾ ಪೋರ್ಟಲ್, ಸರ್ಕಾರಿ ಸಹಾಯವಾಣಿ 1902, ವಾಟ್ಸಾಪ್, ಸಾಮಾಜಿಕ ಜಾಲತಾಣಗಳು ಹಾಗೂ ಜನಸಭೆಗಳಲ್ಲಿ ಸಾರ್ವಜನಿಕರು ಸಲ್ಲಿಸುವ ದೂರುಗಳು ಇನ್ನು ಮುಂದೆ ಸಕಾಲ ಕಾಯ್ದೆಯಡಿ ಪರಿಗಣನೆಯಾಗಲಿವೆ.

ದೂರುಗಳ ಇತ್ಯರ್ಥಕ್ಕೆ ಮೂರು ಹಂತಗಳಲ್ಲಿ ಒಟ್ಟು 21 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ದೂರು ಸ್ವಯಂಚಾಲಿತವಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಇದರಿಂದ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಲಿದ್ದು, ದೂರುಗಳ ವಿಲೇವಾರಿಯಲ್ಲಿ ವಿಳಂಬಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಸಾರ್ವಜನಿಕ ಸೇವೆ ಒದಗಿಸುವಲ್ಲಿ ಅನಗತ್ಯ ವಿಳಂಬ ಮಾಡಿದ ಜವಾಬ್ದಾರಿಯುತ ಅಧಿಕಾರಿಗಳಿಂದ ಗರಿಷ್ಠ ₹1,500 ಪರಿಹಾರ ವಸೂಲಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಅದೇ ರೀತಿ, ಸುಳ್ಳು ಮಾಹಿತಿ ನೀಡಿ ಅಥವಾ ಕಿರುಕುಳ ನೀಡುವ ಉದ್ದೇಶದಿಂದ ದೂರು ದಾಖಲಿಸುವವರಿಗೂ ₹1,500 ದಂಡ ವಿಧಿಸಲು ಅವಕಾಶವಿದೆ.

ಸಾರ್ವಜನಿಕರ ದೂರುಗಳಿಗೆ ಕಾಲಮಿತಿಯ ಪರಿಹಾರ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಅಧಿಕಾರಿಗಳ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಮಹತ್ವದ ಬದಲಾವಣೆಯಾಗಿದೆ.

 

Prajavikshane

Chandru R Bhanapaur

Leave a Reply

error: Content is protected !!