ಪುರಸಭೆ ಆವರಣದಲ್ಲಿ ಕೆಲವು ತಿಂಗಳಿಂದ ಟೈರ್ ಪಂಚರ್ ಹಾಗಿ ನಿಂತಲ್ಲೇ ನಿಂತ ಟ್ರಾಕ್ಟರ್ ಯಂತ್ರ…

ಮುದಗಲ್ಲ ವರದಿ..

ಪುರಸಭೆ ಆವರಣದಲ್ಲಿ ಕೆಲವು ತಿಂಗಳಿಂದ ಟೈರ್ ಪಂಚರ್ ಹಾಗಿ ನಿಂತ ಟ್ರಾಕ್ಟರ್ ಯಂತ್ರ…

ನಿಂತಲ್ಲೇ ತುಕ್ಕು ಹಿಡಿದ ಕಸ ವಿಲೇವಾರಿ ಟ್ರಾಕ್ಟರ್ ಯಂತ್ರ
ಇಲ್ಲಿನ ಸ್ಥಳೀಯ ಮುದಗಲ್ಲ ಪುರಸಭೆ ಯ ಆವರಣದಲ್ಲಿ ಟೈರ್ ಪಂಚರ್ ಆಗಿ ಹಾಗೂ ಟೈರ್ ಟೂಬ್ ಹಾಳಗಿದ್ದು ಬಿಟ್ಟರೆ ಸಣ್ಣಪುಟ್ಟ ರಿಪೇರಿ ಇಂದ ನಿಂತಲ್ಲೇ ನಿಂತಿದೆ. ಆದರ್ ಕಾಡ೯ ಮಾಡಿಸಿಸಲು ಬಂದ ಸಣ್ಣ ಮಕ್ಕಳು ಟ್ರಾಕ್ಟರ್ ಮೇಲೆ ಕುಳಿತು ಕೊಂಡು ಇನ್ನಷ್ಟು ಯಂತ್ರವನ್ನು ಹಾಳು ಮಾಡುವ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ.

ಬೇಕಾದ ವಸ್ತುಗಳನ್ನು ಅಧಿಕಾರಿಗಳ ವರ್ಗ ಕೇಳಿದಂತೆಲ್ಲ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಮಂಜೂರು ಮಾಡುತ್ತೆ. ಆದರೆ, ಅದನ್ನು ಉಳಿಸುವ ಕೆಲಸವನ್ನು ಅಧಿಕಾರಿಗಳು ಮಾತ್ರ ಮಾಡುತ್ತಿಲ್ಲ. ನಿಂತ ಸ್ಥಳದಲ್ಲೇ ವಾಹನ ನಿಂತಿದ್ದರಿಂದ ತುಕ್ಕು ಹಿಡಿಯುತ್ತಿವೆ. ನಿಂತ ಜಾಗದಲ್ಲೇ ನಿಂತಿದ್ದರಿಂದ ಜನರ ತೆರಿಗೆ ಹಣದಲ್ಲಿ ಖರೀದಿಸಿರುವ ವಾಹನಗಳು ಹಾಳಾಗುತ್ತಿವೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಯಿಂದ ಒಣ, ಹಸಿ ಕಸ ಹಾಕಲು ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ತುಕ್ಕು ಹಿಡಿಯುತ್ತಿದೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!