ಮುದಗಲ್ಲ : ಹಿಂದೂ ಧರ್ಮದ ಸಂರಕ್ಷಣೆ ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಜ.24 ರಂದು ಹಿಂದೂ ಸಮ್ಮೇಳನ..

ಮುದಗಲ್ಲ ವರದಿ..
ಮುದಗಲ್ಲ :- ಜ.24 ರಂದು ಹಿಂದೂ ಸಮ್ಮೇಳನ..
ಮುದಗಲ್: ‘ಸನಾತನ ಹಿಂದೂ ಧರ್ಮದ ಸಂರಕ್ಷಣೆ
ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಜ.24ರಂದು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಹಿಂದೂ ಸಮ್ಮೇಳನ ಆಯೋಜಿಸಾಗಿದೆ,” ಎಂದು ಸಮ್ಮೇಳನದ ಅಧ್ಯಕ್ಷ ಡಾ!!  ಗುರುರಾಜ ದೇಶಪಾಂಡೆ ಹೇಳಿದರು.
ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ,“ಹಿಂದುತ್ವದ ರಕ್ಷಣೆ
ಮತ್ತು ಸನಾತನ ಧರ್ಮ ಉಳಿವಿಗಾಗಿ ಈ ಸಮ್ಮೇಳನ ಆಯೋಜಿಸಿದೆ. ಪಾಶ್ಚಿಮಾತ್ಯದ ಕಡೆಗೆ ಇಂದಿನ ಪೀಳಿಗೆ ಮಾರುಹೋಗುತ್ತಿದ್ದು, ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಹಿಂದುತ್ವದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಯೋಜನೆ ನಮ್ಮದಾಗಿದೆ.
ನಂದವಾಡಗಿ ಅಭಿನವ ಚನ್ನಬಸವ
ಶಿವಾಚಾರ್ಯರು, ಸಿದ್ದಯ್ಯಸ್ವಾಮಿ ಸಾಲಿಮಠ, ವಿಶೇಷ ಉಪನ್ಯಾಸಕರಾಗಿ ಟಿ.ಪ್ರಸನ್ನ ಕುಮಾರ್ ಹಾಗೂ ನಾಡಿನ
ಅನೇಕ ಪ್ರಮುಖರು ಭಾಗಿಯಾಗುವರು,” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ  ಮಲ್ಲಪ್ಪ ಮಾಟೂರು  ,ಗುಂಡಪ್ಪ ಗಂಗಾವತಿ ಮಹಾಂತೇಶ್ ಅಕ್ಷತಿ ,ರವಿ ಕಟ್ಟಿಮನಿ
 ಉಪಸ್ಥಿತರಿದ್ದರು..
ವರದಿ:-ಮಂಜುನಾಥ ಕುಂಬಾರ .

Prajavikshane

Chandru R Bhanapaur

Leave a Reply

error: Content is protected !!