ಮುದಗಲ್ಲ ವರದಿ..
ಶಿವಾಜಿ ಛತ್ರಪತಿ ಮಹಾರಾಜರ 396ನೇ ಜಯಂತೋತ್ಸವದ ಶೋಭಾಯಾತ್ರೆ..
ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನತೆ:- ಎಲ್ಲೆಡೆ ರಾರಾಜಿಸಿದ ಕೇಸರಿ ಧ್ವಜ..

ಮುದಗಲ್ಲ :- ಲಿಂಗಸುಗೂರು ರಸ್ತೆಯ ಬನ್ನಿಕಟ್ಟೆಗೆ ಪೂಜೆ ಸಲ್ಲಿಸಿ, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆಯಾದ ಶಶಿಕಲಾ ಭೋವಿ ಅವರು ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಪರಪರಿ ಮತ್ತು ಕೇಸರಿ ಧ್ವಜಗಳು ರಾರಾಜಿಸಿದವು. ಮೆರವಣಿಗೆಯಲ್ಲಿ , ಶಿವಾಜಿ ಕುರಿತ ಗೀತೆಗಳಿಗೆ ತಕ್ಕಂತೆ ನೂರಾರು ಯುವ ಸಮೂಹ ಜೈ ಶಿವಾಜಿ, ಜೈಭವಾನಿ ಘೋಷವಾಕ್ಯ ಮೊಳಗಿಸುತ್ತ ನೃತ್ಯ ಮಾಡಿದರು.
ಪೋಲಿಸ್ ಠಾಣೆಯ ಹತ್ತಿರವಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನಕ್ಕೆ ಅಂತಿಮಗೊ ಳಿಸಿದರು.

ಮೆರವಣಿಗೆ ಬಿಗಿ ಪೋಲಿಸ್ ಬಂದೋಬಸ್ತ್ ..
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಷುಗಿರಿ ನೇತೃತ್ವದಲ್ಲಿ ಭಾರಿ ಪೋಲಿಸ್ ಬಂದೋಬಸ್ತ ನಲ್ಲಿ ರವಿವಾರ ಅದ್ದೂರಿ ಯಾಗಿ ಮಾಡಲಾಯಿತು. ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಗುಪ್ತದಳ ಅಧಿಕಾರಿ ರಾಜಕುಮಾರ ಸೇರಿದಂತೆ ಜಿಲ್ಲೆಯ ಸಿಪಿಐ 6 ಜನ,ಪಿಎಸೈ 10,ಎಎಸೈ 7 ಜನ,ಪಿಸಿ . 54,ಗೃಹರಕ್ಷಕದಳ 8 ಹಾಗೂ 4 ಜಿಲ್ಲಾ ಮೀಸಲು ಪಡೆ ತುಕಡಿಗಳ ಪೋಲಿಸರನ್ನು ಬಂದೋಬಸ್ತಗೆ
ನಿಯೋಜಿಸಿದ್ದರು.

ಊಟ ಉಪಾಹಾರ ವ್ಯವಸ್ಥೆ..
ಮೆರವಣಿಗೆ ಮುಗಿದ ನಂತರ ಬಸವೇಶ್ವರ. ದೇವಸ್ಥಾನ ದಲ್ಲಿ 1000 ಜನರಿಗೆ ಊಟದ ವ್ಯವಸ್ಥೆ ಹಾಗೂ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಸಂದರ್ಭದಲ್ಲಿ ಡಾ!! ಗುರುರಾಜ ದೇಶಪಾಂಡೆ, ಮುಖಂಡ ಶರಣಬಸವವ್ಯಾಕರನಾಳ, ಮಲ್ಲಪ್ಪ ಮಾಟುರು,
ಸಣ್ಣಸಿದ್ದಯ್ಯಸ್ವಾಮಿ, ತೋಟಮ್ಮ, ಗುಂಡಪ್ಪ ಗಂಗಾವತಿ, ರವಿ ಕಟ್ಟಿಮನಿ, ಸಿದ್ದರಾಮೇಶ್ವರ ಆದಾಪೂರ, ಅರುಣ ಕುಮಾರ ಯರದಿಹಾಳ, ಸಂಗಮೇಶ್ ಸರಗಣಚಾರಿ ರಾಘವೇಂದ್ರ ಕುದರಿ ,ಶಿವರಾಜ ತಳವಾರ, ಹೇಮಂತ ನಾಗಲಾಪೂರ,ಸೈಯದ್ ನ್ಯಾಮತ್ ಖಾದ್ರಿ,ರಘುವೀರ ಮೇಗಳಮನಿ, ಅಮರೇಶ್ ಸುಂಕದ ಸೇರಿದಂತೆ ಇತರರು ಇದ್ದರು
ವರದಿ:- ಮಂಜುನಾಥ ಕುಂಬಾರ