ಮುದಗಲ್ಲ :- ಪಂಚಾಸ್ಯ ಬ್ರಹ್ಮನಾಗ, ನಂದೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ..

ಮುದಗಲ್ಲ: ಪಟ್ಟಣದ ಸ್ವಯಂಭೂ ಹಿರೇವಾಡ
ನಾಗರಾಜರ ಜೀರ್ಣೋದ್ದಾರ ಸಮಾರಂಭ ಹಿನ್ನೆಲೆ,
ಪಂಚಾಸ್ಯ ಬ್ರಹ್ಮನಾಗ, ನಂದೀಶ್ವರ ಸಹಿತ ಮೂರ್ತಿಗಳನ್ನು
ಪ್ರತಿಷ್ಠಾಪಿಸಲಾಯಿತು. ಪಟ್ಟಣದ ಕಿಲ್ಲಾದ ರಾಮ ಭಟ್
ಮನೆಯ ಹಿಂದುಗಡೆ ಇರುವ ಹಳೆಯ ದೇವಸ್ಥಾನದ
ಜೀರ್ಣೋದ್ದಾರ ಹಿನ್ನೆಲೆ ಕಲಶಾರಾಧನೆ, ಪೂಜೆ,
ಹೋಮ, ಕುಂಭ ಪ್ರತಿಷ್ಠಾನ, ಮೂರ್ತಿಗಳ ಪ್ರಾಣ
ಪ್ರತಿಷ್ಠಾಪನೆ, ಆರಾಧನೆ, ಅಭಿಷೇಕ, ಕ್ಷೀರಾಭಿಷೇಕ,
ಶೋಡಸ ಉಪಚಾರ ಪೂಜೆ, ಮಹಾ ನೀರಾಜನ ಸಭೆ ಸೇರಿ
ನಾನಾ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.

ನಾರಾಯಣ ಗಣಪತಿ ಭಟ್ ಕಾರ್ಯಕ್ರಮದ ನೇತೃತ್ವ
ವಹಿಸಿದ್ದರು. ಪ್ರಕಾಶ ಭಟ್, ಗಣಪತಿ ಭಟ್, ಚಿನ್ಮಯ
ಭಟ್, ಪ್ರತೀಕ ಭಟ್, ಪವನ ಭಟ್, ಪ್ರಮೋದ ಭಟ್,
ಭಾಸ್ಕರ ಶಾಸ್ತ್ರಿ ರಾಜೇಶ ವೈದ್ಯ ಇದ್ದರು.
ವರದಿ:- ಮಂಜುನಾಥ ಕುಂಬಾರ..