LOCAL NEWS : ಡಿ. 15 ರಂದು ಸುವರ್ಣಸೌಧ ಎದುರು ಪತ್ರಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಬೃಹತ್ ಪ್ರತಿಭಟನೆ : ಸುನಿಲ್ ಕುಮಾರ್ ಮಠದ್

You are currently viewing LOCAL NEWS : ಡಿ. 15 ರಂದು ಸುವರ್ಣಸೌಧ ಎದುರು ಪತ್ರಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಬೃಹತ್ ಪ್ರತಿಭಟನೆ : ಸುನಿಲ್ ಕುಮಾರ್ ಮಠದ್

LOCAL NEWS : ಡಿ. 15 ರಂದು ಸುವರ್ಣಸೌಧ ಎದುರು ಪತ್ರಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಬೃಹತ್ ಪ್ರತಿಭಟನೆ : ಸುನಿಲ್ ಕುಮಾರ್ ಮಠದ್

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ : ರಾಜ್ಯದ 14 ಸಾವಿರ ಪತ್ರಕರ್ತರಿಗೆ ಮೂಲಭೂತ ರಕ್ಷಣೆ ಕಾಯ್ದೆ, ಬಸ್ ಪಾಸ್ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಬೆಳಗಾವಿಯಲ್ಲಿ 15 ರಂದು ಪ್ರತಿಭಟನೆ ನಡೆಸಲಾಗುತ್ತಿದ್ದು ಇದಕ್ಕೆ ರಾಜ್ಯದ ಸಮಸ್ತ ಪತ್ರಕರ್ತರು ಬೆಂಬಲ ಸೂಚಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸುನಿಲಕುಮಾರ ಮಠದ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶತಿ, ‘ಸುನಿಲಕುಮಾರ ಮಠದ ಮಾತನಾಡುತ್ತ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಇತಿಹಾಸವಿದೆ ಆದರೆ ವಾಸ್ತವ ಸಂಗತಿ ತಿಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಹಾಗೂ ಮೂಲಭೂತ ಸೌಲಭ್ಯ ಇಲ್ಲದೆ ಇರುವುದನ್ನು ಖಂಡಿಸಿ ಬಂಗ್ಲೆ ಮಲ್ಲಿಕಾರ್ಜುನ ಸ್ಥಾಪಿತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ವತಿಯಿಂದ ಇದೇ ಡಿಸೇಂಬರ್ 15 ರಂದು ಬೆಳಗಾವಿ ಚಳಿಗಾಲದ ಅಧಿವೇಶನದ ನಿಮಿತ್ಯ ಸುವರ್ಣಸೌಧದ ಮುಂದೆ ಮುಖ್ಯಮಂತ್ರಿಗಳ ಸಚಿವರ ಮಧ್ಯೆ ಪ್ರತಿಭಟನೆ ಆಯೋಜಿಸಲಾಗಿದೆ.

ಈ ಪ್ರತಿಭಟನೆಗೆ ರಾಜ್ಯಾಧ್ಯಕ್ಷರ ಮನವಿಯ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಅಧ್ಯಕ್ಷರು ಮತ್ತು ಸದಸ್ಯರುಗಳು ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣಾ ಕಾಯಿದೆ ಹಾಗೂ ಮೂಲಭೂತ ಸೌಲಭ್ಯ ಪಡೆದುಕೊಳ್ಳುವಲ್ಲಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ನೀಡಿದರು ಸಹ ಯಾವುದೇ ರೀತಿಯ ಪ್ರಯೋಜನ ವಿಲ್ಲದಂತಾಗಿದೆ. ರಕ್ಷಣಾ ಕಾಯಿದೆ, ಮೂಲಭೂತ ಸೌಕರ್ಯಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದು ಸೇರಿದಂತೆ ಸರ್ಕಾರಕ್ಕೆ ಪತ್ರಕರ್ತರ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದ್ದು ಎಲ್ಲಾ ಪತ್ರಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸುನಿಲಕುಮಾರ್ ಮಠದ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!