“ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರ ಸಮುದಾಯಗಳಿಗೆ ಘೋರ ಅನ್ಯಾಯ, ಆರೋಪ : ತಲೆ ಕೂದಲು ಬೋಳಿಸಿಕೊಂಡು ಬೃಹತ್ ಪ್ರತಿಭಟನೆ”
ಪ್ರಜಾವೀಕ್ಷಣೆ ಡೆಸ್ಕ್ ನ್ಯೂಸ್ :
ಕುಕನೂರು : “ರಾಜ್ಯ ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ನೈಜತೆಯ ಆಧಾರದ ಮೇಲೆ ಮಾಡಿರುವುದಿಲ್ಲ. ಇದು ಅವೈಜ್ಞಾಕ ಕಾನೂನು ಕ್ರಮವಾಗಿದೆ. ಇದರಿಂದ ಬಂಜಾರ ಕೊರಮ, ಕೊರಚ ಮತ್ತು ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಆರೋಪಿಸಿ , ಬಂಜಾರರ ಸಾಂಪ್ರದಾಯಿಕ ಉಡುಗೆ ತೊಡಿಗೆಗಳನ್ನು ತೊಟ್ಟು, ಕುಲ ಕಸುಬು ಕಟ್ಟಿಗೆ ಮಾರುವುದರೊಂದಿಗೆ ಮತ್ತು ಕೆಲ ಯುವಕರು ತಮ್ಮ ತಲೆ ಕೂದಲನ್ನು ಬೋಳಿಸುವ ಮುಖಾಂತರ ವಿಶಿಷ್ಡವಾಗಿ ಕುಕನೂರ ಪಟ್ಟಣದ ಅಂಬೇಡ್ಕ್‌ರ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದವರಗೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು”.
ಈ ಪ್ರತಿಭಟನೆ ಉದ್ದೇಶಿಸಿ ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಅವರು ಮಾತನಾಡಿ, ‘ಕೊಲಂಬೋ (ಕೊರಮ,ಕೊರಚ,ಲಂಬಾಣಿ, ಭೋವಿ) ಸಮುದಾಯಗಳ ಜನಸಂಖ್ಯೆಯು ಹೆಚ್ಚಾಗಿದ್ದು, ಈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಉದ್ಯೋಗಿಕ ಸೌಲಭ್ಯಗಳಿಂದ ಈಗಾಗಲೇ ವಂಚಿತವಾಗಿದೆ. ಹೀಗಾಗಿ ನ್ಯಾ. ನಾಗಮೋಹನದಾಸ್ ಆಯೋಗವು ಪರಿಶಿಷ್ಠ ಜಾತಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು. ಹೀಗಾಗಿ ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ ಎಂದರು.
ಈ ಹಿಂದಿನ ಸರ್ಕಾರವು ನಮಗೆ (ಕೊಲಂಬೋ) ಶೇ. 4.5 ರಷ್ಟು ಒಳ ಮೀಸಲಾತಿಯನ್ನು ನೀಡುವುದಾಗಿ ತೀರ್ಮಾನಿಸಿತು. ಆದರೆ ನಾವು ಅದನ್ನು ತಿರಸ್ಕರಿಸಿದವು. ಆದರೆ ಈಗ ನಾಗಮೋಹನ್ ದಾಸ್ ವರದಿಯು ಬಂಜಾರ ಲಂಬಾಣಿ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಶೇ. 4 ರಷ್ಟು ಒಳಮೀಸಲಾತಿ ನೀಡಬೇಕೆಂದು ಹೇಳಿದೆ ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದರು. ಸರ್ಕಾರದ ಸಚಿವ ಸಂಪುಟದ ತೀರ್ಮಾನ, ಕರಡು ಅಧಿಸೂಚನೆ ಹಾಗೂ ನಾಗಮೋಹನದಾಸ ವರದಿ ಕೊಲಂಬೋ ಸಮುದಾಯಗಳಿಗೆ ಮಾರಕವಾಗಿವೆ .ಇಬ್ಬಗೆಯ ನೀತಿಯ ಮೂಲಕ ಒಳಮೀಸಲಾತಿ ಸೌಲಭ್ಯ ವರ್ಗೀಕರಣ ಮಾಡುವಲ್ಲಿ ತಾರತಮ್ಯ ಮಾಡಿರುತ್ತದೆ ಹಾಗಾಗಿ ಈ ನೀತಿಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಾಪಾಲು ನೀಡುವ ಮೂಲಕ ಬಂಜಾರ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಶೇ. 5ರಷ್ಟು ಮೀಸಲಾತಿಯ ಪ್ರಮಾಣವನ್ನು ನೀಡಬೇಕು. ಬುಡಗ ಜಂಗಮ ಸೇರಿದಂತೆ ಅಲೆಮಾರಿ ಸಮುದಾಯಗಳ 59 ಜಾತಿಯ ಸಹೋದರ ಸಮುದಾಯಗಳನ್ನು ಸಿ ಗುಂಪಿನಿಂದ ತೆಗೆದು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ನಮ್ಮ ಸಮುದಾಯದಕ್ಕೆ ಸಾಂವಿಧಾನಿಕವಾಗಿ ಮೀಸಲಾತಿಯ ನ್ಯಾಯ ನೀಡಬೇಕು, ನಮ್ಮ ಹೋರಾಟವನ್ನು ಕಡೆಗೆಣಸಿದರೇ, ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ಸಮೀಕ್ಷೆ ಮಾಡುವ ಸಂಧರ್ಭದಲ್ಲಿ ಉಪಜಾತಿ ಕಾಲಂ ನಲ್ಲಿ ಬಂಜಾರ’ ಕೊರಮ ಕೊರಚ ಬೋವಿ ಸಮುದಾಯಗಳ ಜಾತಿಯನ್ನು ಸರಿಯಾಗಿ ನಮೂದಿಸಿರುವುದಿಲ್ಲ. ಕೊಲಂಬೋ ವಾಸಿಸುವ ಕೆಲ ಕಡೆ ಆದಿ ಆಂಧ್ರ, ಆದಿ ದ್ರಾವಿಡ , ಆದಿ ಕರ್ನಾಟಕ ಎಂದು ತಪ್ಪಾಗಿ ನಮೂದಿಸಲಾಗಿದೆ. ಹೀಗಾಗಿ ವಿವಿಧ ರೀತಿಯ ಧೋರಣೆಗಳಿಂದ ಈ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ” • ಚಂದ್ರು ಭಾನಾಪುರ, ಪತ್ರಕರ್ತ, ಸಮಾಜದ ಯುವ ಮುಖಂಡ
ಈ ವೇಳೆ ಪ್ರತಿಭಟನೆ ನಡೆಸಿದ ಬಳಿಕ ಕುಕನೂರ ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರಿಗೆ ಮನವಿ ಪತ್ರ ಸಹ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಮೇಘರಾಜ್ ಬಳಗೇರಿ, ಬಸವರಾಜ ನಾಯ್ಕ್, ಜೀತು ನಾಯ್ಕ್, ಹಂಪಣ್ಣ ಕಟ್ಟಿಮನಿ, ಯಮನೂರಪ್ಪ ಕಟ್ಟಮನಿ, ಯಲ್ಲಪ್ಪ ಕಾರಭಾರಿ, ಯಮನೂರಪ್ಪ ಭಾನಾಪೂರ್, ಪರಸಪ್ಪ ಕಾರಭಾರಿ, ತುಕಾರಂ ಹೊನ್ನುಂಚಿ, ಸೋಮಪ್ಪ ಚಿಕೇನಕೊಪ್ಪ, ಕಳಕೇಶ್ ನಾಯ್ಕ್, ಮಹಿಳಾ ಮುಖಂಡರಾದ ದೇವವ್ವ ಕಟ್ಟಿಮನಿ, ಶಿವವ್ವ ಭಾನಾಪುರ, ಲಕ್ಷ್ಮವ್ವ ಬಳಗೇರಿ,ಸೋನವ್ವ ಚಿಕೆನಕೊಪ್ಪ, ಹಾಗೂ ಶ್ರೀಕಾಂತ್ ಕಟ್ಟಿಮನಿ, ರಾಘವೇಂದ್ರ ಬಳಗೇರಿ, ಪ್ರಕಾಶ್ ಬಳಗೇರಿ , ಹೋಬಣ್ಣ ಚವ್ಹಾಣ, ಬಸುವರೆಡ್ದೆಪ್ಪ ಬಳಗೇರಿ, ಹನುಮಂತಪ್ಪ ಚವ್ಹಾಣ, ಕಲ್ಲಪ್ಪ ಕಟ್ಟಿಮನಿ, ತಿರುಪತಿ ಕಟ್ಟಿಮನಿ, ಕುಮಾರ್ ಬಳಗೇರಿ ಸೇರಿದಂತೆ ಅನೇಕರು ಭಾಗವಹಿಸಿದರು.