GANGAVATI NEWS : ಪಿಎಸ್‌ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ!

You are currently viewing GANGAVATI NEWS : ಪಿಎಸ್‌ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ!

ಗಂಗಾವತಿ,ಅ.06 : ನಗರ ಠಾಣೆಯ ಪಿಎಸ್‌ ಐ ಕಾಮಣ್ಣ ಹಾಗೂ ಪೊಲೀಸ್ ಪೇದೆ ಮರಿಯಪ್ಪ ಅವರನ್ನು ಅಮಾನತು ಗೊಳಿಸಿರುವುದು ಪೊಲೀಸರ ನೈತಿಕ ಸೈರ್ಯ ಕುಸಿಯುವಂತೆ ಮಾಡಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಕಾಳೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

BREAKING : ಮುರಾರ್ಜಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ : ಕಳಪೆ ಗುಣಮಟ್ಟದ ಊಟ, ಬೇಸತ್ತ ಮಕ್ಕಳು!!

ಹಬ್ಬ, ಹರಿದಿನಗಳಲ್ಲಿ, ಚುನಾವಣೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಮನೆ, ಕುಟುಂಬ ತೊರೆದು ಹಗಲಿ ರುಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿ ಸುವ ಪೊಲೀಸರಿಗೆ ಕೌಟುಂಬಿಕವಾಗಿ ಹಾಗೂ ಇಲಾಖೆಯಲ್ಲಿ ಆಂತರಿಕ ವಾಗಿ ಸಾಕಷ್ಟು ಒತ್ತಡಗಳಿರುತ್ತವೆ. ಆದರೂ ಅವೆಲ್ಲ ಒತ್ತಡವನ್ನು ಸಹಿಸಿಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸುವಾಗ
ಸಹನೆ ಹಾಗೂ ಸಹಕಾರದೊಂದಿಗೆ ವರ್ತಿಸಬೇಕಾಗುತ್ತದೆ. ಆ ವೇಳೆಯಲ್ಲಿ ಪೊಲೀಸರೂ ಕೂಡ ಕೆಲ ವೊಂದು ರಾಜಿಸೂತ್ರಗಳನ್ನು ಅನುಸರಿಸಿ ಶಾಂತಿಯುತ ವಾತಾವರಣ ಕಾಯುವುದು ಅನಿವಾರ್ಯವಾಗುತ್ತದೆ.

BIG NEWS : ಪಿಎಸ್ಐ ಸೇರಿ ಮುಖ್ಯ ಪೇದೆ ಅಮಾನತು..!!

ಇಂತಹ ಸಂದರ್ಭಗಳಲ್ಲಿ ನಡೆ ಯುವ ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದಾಗಿ ಬಿಂಬಿಸಿ ಅಮಾನತ್ತಿ ನಂತಹ ಶಿಕ್ಷೆ ವಿಧಿಸುವುದು ಪೊಲೀ ಸರ ನೈತಿಕ ಸ್ಥೆರ್ಯ ಕುಸಿಯುವಂತೆ ಮಾಡುತ್ತದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಎಸ್‌ಐ ಕಾಮಣ್ಣ ಹಾಗೂ ಪೊಲೀಸ್ ಪೇದೆ ಮರಿಯಪ್ಪ ಅವರ ಅಮಾನತ್ತು ಆದೇಶ ವಾಪಸ್ಸು ಪಡೆಯಬೇಕು ಎಂದು ಈ ಮೂಲಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಕಾಳೆ ಹೇಳಿದರು. ಕೆಲವೊಮ್ಮೆ ಸಣ್ಣಪುಟ್ಟ ಲೋಪದೋಷಗಳು ಆಗುತ್ತಿರುತ್ತವೆ. ಅವುಗಳನ್ನೇ ದೊಡ್ಡದಾಗಿ ಬಿಂಬಿಸಿ ಪೊಲೀಸರ ಮಾನಸಿಕ ಸ್ಥೆರ್ಯ ಕಸಿಯುವ ಪ್ರಯತ್ನಗಳು ನಡೆಯು ತ್ತಿವೆ. ಗಣೇಶ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಜನದಟ್ಟಣೆ ಹಾಗೂ ಯುವಕರನ್ನು ನಿಯಂತ್ರಿಸಲು ಕೆಲ ವೊಮ್ಮೆ ಪೊಲೀಸರೂ ಅವರೊಂದಿಗೆ ಒತ್ತಾಯಿಸಿದ್ದಾರೆ.

Leave a Reply

error: Content is protected !!