ಹಿಮಾಚಲ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಹಾಮಳೆಯಿಂದ ಭಾರೀ ಅನಾಹುತಗಳು ಸಂಭವಿಸುತ್ತಿದೆ. ಇಲ್ಲಿನ ಬಹುತೇಕ ನದಿಕೊಳ್ಳಗಳು ತುಂಬಿ ಹರಿಯುತ್ತಿದೆ. ಅದೇ ರಿತಿಯಲ್ಲಿ ಇಂದು ಇಲ್ಲಿನ ಬಿಯಾಸ್ ನದಿಯಲ್ಲಿ ಟ್ರಕ್ ಕೊಚ್ಚಿ ಹೋಗುತ್ತಿರುವುದನ್ನು ವಿಡಿಯೋ ಸೆರೆಹಿಡಿಯಲಾಗಿದ್ದು, ಇದು ನೋಡುಗರಿಗೆ ಒಂದು ಕ್ಷಣ ಮೈ ಝುಮ್ ಅನ್ನಿಸುತ್ತೆ.
ಭಾರತೀಯ ಹವಾಮಾನ ಇಲಾಖೆಯು ಈ ರಾಜ್ಯಕ್ಕೆ ‘ಅತಿವೃಷ್ಟಿ ಎಚ್ಚರಿಕೆ’ ನೀಡಿದೆ. ಈ ಕೆಲ ದಿನಗಳ ಹಿಂದೆ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು, ಭಾರೀ ಮಳೆಯ ಸಂಭವಿದ್ದು, ಜನರು ಮನೆಯೊಳಗೆ ಇರುವಂತೆ ಮನವಿ ಮಾಡಿಕೊಂಡಿದ್ದರು.