BREAKING NEWS : ಕುಕನೂರಿನಲ್ಲಿ ನಾಳೆ ಪ್ರಜಾಸೌಧ ಹಾಗೂ ತಾಲೂಕ ಪಂಚಾಯತ್ ಕಟ್ಟಡಕ್ಕೆ ಭೂಮಿ ಪೂಜೆ!
PV NEWS ಕನ್ನಡ 24×7 :
ಕುಕನೂರು, ಜು. 16: ಕುಕನೂರು ತಾಲೂಕ ಪ್ರಜಾಸೌಧ (ತಹಸೀಲ್ದಾರ್ ಕಚೇರಿ) ಹಾಗೂ ತಾಲೂಕ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಜುಲೈ 17ರಂದು (ಶುಕ್ರವಾರ) ಮಧ್ಯಾಹ್ನ 2 ಗಂಟೆಗೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ.
ಕುಕನೂರು ಪಟ್ಟಣದ ರುದ್ರ ಮುನೇಶ್ವರ ದೇವಸ್ಥಾನದ ಗುದ್ನೇಪ್ಪನ ಮಠದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸರ್ವೆ ನಂ. 78ರ ಜಮೀನಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳು ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಕುಕನೂರು ತಾಲೂಕಿನ ರೈತರು, ನಾಗರಿಕರು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.