ಶಿವಮೊಗ್ಗ : 2023-24ನೇ ಸಾಲಿನ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೋಟಗಾರಿಕೆ ವಿಸ್ತರಣೆಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಯುವಕರಿಗೆ ನವೆಂಬರ್.27 ರಿಂದ ಡಿಸೆಂಬರ್ 02 ರವರೆಗೆ 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಪುಷ್ಪ ಬೆಳೆ ಉತ್ಕøಷ್ಟ ಕೇಂದ್ರ ಹಾಗೂ ತುಂಗಾ ತೋಟಗಾರಿಕೆ ಕ್ಷೇತ್ರ, ಶಿವಮೊಗ್ಗ ಇಲ್ಲಿ ಹಮ್ಮಿಕೊಂಡಿದ್ದು, ಕನಿಷ್ಠ 5 ತರಗತಿ ಪಾಸಾಗಿರುವ 18 ರಿಂದ 33 ವರ್ಷದೊಳಗಿನ ಆಸಕ್ತ ಗ್ರಾಮೀಣ ಯುವಕರಿಂದ ಅರ್ಜಿ ಹಾಕಬಹುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರು / ಪ್ರಾಜೆಕ್ಟ್ ಆಫೀಸರ್, ಪುಷ್ಪ ಬೆಳೆ ಉತ್ಕøಷ್ಟ ಕೇಂದ್ರ, ಕಂಟ್ರಿ ಕ್ಲಬ್ ರಸ್ತೆ, ಈ ಕಛೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 24ರೊಳಗಾಗಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08182-295428 ನ್ನು ಸಂಪರ್ಕಿಸಿ.