ಜಾತ್ರೆಯಲ್ಲಿ ಅಂಗಡಿ-ಮುಗ್ಗಟ್ಟು ಹಾಕಲು ವ್ಯಾಪಾರಸ್ಥರ ಹಿಂದೇಟು..!!
ಕುಕುನೂರು : ಯಲಬುರ್ಗಾ ಹಾಗೂ ಕುಕುನೂರು ತಾಲೂಕಿನಲ್ಲಿ ಅತಿ ದೊಡ್ಡ ಜಾತ್ರೆ ಆದ ಶ್ರೀ ಗುಗ್ನೇಶ್ವರ ಪಂಚಕಳಸ ಮಹಾ ರಥೋತ್ಸವವು ಇದೆ ಡಿ.15 ರಂದು ಜರಗಲಿದೆ.
ಅವಳಿ ತಾಲುಕಿನಲ್ಲಿಯೇ ಅತಿ ದೊಡ್ಡ ಜಾತ್ರೆ ಆಗಿರುವುದರಿಂದ ಜಾತ್ರೆಗೆ ಲಕ್ಷಾಂತರ ಭಕ್ತರ ಸೇರುತ್ತಾರೆ. ಅದೇ ರೀತಿಯಾಗಿ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದಲೂ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಬರುತ್ತಾರೆ. ಹೀಗೆ ಸುಮಾರು ವರ್ಷಗಳಿಂದ ಈ ಪರಂಪರೆ ನೆಡೆದುಕೊಂಡು ಬಂದಿದೆ. ಅತಿ ಹೆಚ್ಚು ಅಂಗಡಿ ಮುಂಗಟ್ಟುಗಳು ಹಾಗೂ ವ್ಯಾಪಾರಸ್ಥರು ಬರುವುದರಿಂದಲೇ ಜಾತ್ರೆಯು ಸುಮಾರು 15 ರಿಂದ 20ದಿನಗಳ ವರೆಗೂ ನಡೆಯುತ್ತದೆ.
ಆದರೆ ಈ ವರ್ಷ ವ್ಯಾಪಾರಸ್ಥರು ಜಾತ್ರೆಯಲ್ಲಿ ಅಂಗಡಿ ಮುಂಗಟ್ಟುಗಳು ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಜಾಗದ ಬಾಡಿಗೆ ದರ ದುಪ್ಪಟಾಗಿದೆ ಎನ್ನಲಾಗುತ್ತಿದೆ.
ಹಿನ್ನಲೆ :-ಪ್ರತಿ ವರ್ಷ ಜಾತ್ರೆ ಒಂದು ತಿಂಗಳು ಮುಂಚೆಯೇ ತಹಶೀಲ್ದರರ ನೇತ್ರತ್ವದಲ್ಲಿ ದೇವಾಸ್ಥಾನಕ್ಕೆ ಸಂಭಂದಿಸಿದಂತೆ ಇರುವ ಬಯಲು ಜಾಗೆಯಲ್ಲಿ ಅಂಗಡಿಗಳನ್ನು ಹಾಕಿಸುವುದು, ಬಾಡಿಗೆಯನ್ನು ಪಡೆಯುವುದು ಹಾಗೂ ದೇವಸ್ಥಾನಕ್ಕೆ ಸೇರಿದ ಹುಣಸೆ ಮರ ಹಾಗೂ ಕಾಯಿ ಒಡೆಯುವ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕವಾಗಿ ಹರಾಜನ್ನು ಏರ್ಪಡಿಸಲಾಗಿರುತ್ತದೆ. ಈ ಹರಾಜಿನಲ್ಲಿ ಸರ್ಕಾರದ ಇತ್ತಿಷ್ಟು ಅಂತ ಹಣವನ್ನು ನಿಗದಿ ಪಡಿಸಿರುತ್ತದೆ.
ಆದರೆ ಹರಾಜಿನಲ್ಲಿ ಭಾಗವಹಿಸಿದವರು ಲಾಭಾಂಶವನ್ನು ಪಡೆಯುವ ಉದ್ದೇಶದೊಂದಿಗೆ ಹೆಚ್ಚಿನ ಹರಾಜನ್ನು ಕೂಗಿ ಹರಾಜನ್ನು ಪಡೆದುಕೊಳ್ಳುತ್ತಾರೆ. ನಂತರದಲ್ಲಿ ದೇವಸ್ಥಾನದ ಬಯಲು ಜಾಗೆಯಲ್ಲಿ ಅಂಗಡಿಗಳನ್ನು ಹಾಕಲು ಸ್ಥಳ ನಿಗದಿ ಪಡಿಸುವುದು ಹಾಗೂ ದರ ನಿಗದಿ ಪಡಿಸುವುದನ್ನು ಹರಾಜು ನಿರ್ವಹಿಸುತ್ತಾರೆ. ಇದರಿಂದ ಹರಾಜು ಪಡೆದವರು ಬೇಡಿಕೆಯಷ್ಟು ಹಣ ನೀಡಿದರೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡುತ್ತಾರೆ ಎನ್ನುತ್ತಾರೆ ವ್ಯಾಪಾರಸ್ಥರು.
ಸರ್ಕಾರ ನಿಗದಿ ಪಡಿಸಿದ ದರವನ್ನು ಬಿಟ್ಟು ಹೆಚ್ಚವರಿಯಾಗಿ ಹಣ ಪಡೆಯುತ್ತಿದ್ದಾರೆ. ಹಿಂದನ ವರ್ಷದಲ್ಲಿ ನಾವು ಹೆಚ್ಚುವರಿ ಹಣವನ್ನು ನೀಡಲು ಆಗದೆ ಅವಮಾನವನ್ನು ಅನುಭವಿಸಿದ್ದೇವೆ ಎಂದು ಹೆಸರು ಹೇಳು ಇಚ್ಚಿಸಿದ ವ್ಯಾಪರಸ್ಥರು ಹಂಚಿಕೊಂಡರು