ವಿಜಯನಗರ (ಹೊಸಪೇಟೆ) : ರಾಜ್ಯದ ಮೂರು ಜಿಲ್ಲೆಗಳ ಜೀವನಾಡಿಯಾದ “ತುಂಗಭದ್ರಾ ಜಲಾಶಯ”ದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದು ತ್ರಿವಳಿ ರಾಜ್ಯಗಳ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಒಳಹರಿವು ಹೆಚ್ಚಾಗಿದೆ. ಈಗ ಸದ್ಯ 9 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಬರುತ್ತಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾನಯನ ಪ್ರದೇಶದಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ
ಭಾರೀ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೀಗಾಗಿ ಭದ್ರಾ ಜಲಾಶಯದಿಂದಲೂ ತುಂಗಭದ್ರಾ ಜಲಾಶಯಕ್ಕೆ ನೀರು ಬಿಡಲಾಗಿದೆ. 200 ರಿಂದ 400 ಕ್ಯೂಸೆಕ್‌ಗಿಂತ ಕಡಿಮೆ ಇದ್ದ ಒಳ ಹರಿವು ಇದೇ ಸೋಮವಾರ ಎರಡು ಪಟ್ಟು ಹೆಚ್ಚಾಗಿದೆ. ಬೆಳಗ್ಗೆ ತುಂಗಭದ್ರಾ ಆಡಳಿತ ಮಂಡಳಿ ನೀಡಿದ ಮಾಹಿತಿಯ ಪ್ರಕಾರ, 9,892 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಒಂದೇ ದಿನಕ್ಕೆ 1 ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಬಂದಿದ್ದು, ಈ ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಹರುಷದಿಂದ ತೇಲಾಡುತ್ತಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಮುಂಗಾರುಮಳೆ ಪೂರ್ವದಲ್ಲಿ ಹೇಳಿಕೊಳ್ಳುವಷ್ಟು ವರುಣನ ಆಗಮನ ಆಗಿರಲಿಲ್ಲ. ಈ ಬಾರಿ ಕಳೆದ ಕಳೆದ ಮೇ 07ರಂದು ಒಳಹರಿವು ಆರಂಭವಾಗಿತ್ತು, ನಂತರ ಕೆಲ ದಿನಗಳ ಕಾಲ ಉತ್ತಮ ಒಳಹರಿವಿನಿಂದ ಜಲಾಶಯದಲ್ಲಿ ಎರಡು ಟಿಎಂಸಿ ಇದ್ದ ನೀರು, ಅಂದಾಜು 5 ಟಿಎಂಸಿಗೂ ಹೆಚ್ಚು ಬಂದಿತ್ತು. ಬಳಿಕ ಜಲಾಶಯದಲ್ಲಿ ಸಂಪೂರ್ಣ ಒಳಹರಿವು ಕಡಿಮೆಯಾಯಿತು. ರಾಜ್ಯದಲ್ಲಿ ಇದೀಗ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಮತ್ತೆ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡಿದೆ. ಕಳೆದ ಭಾನುವಾರ 280 ಕ್ಯೂಸೆಕ್ ಇದ್ದ ಒಳಹರಿವು, ಸೋಮವಾರಾನ್ನುಷ್ಟರಲ್ಲಿ 9,892 ಕ್ಯೂಸೆಕ್‌ನಷ್ಟಾಗಿದೆ. ಜಲಾಶಯದಲ್ಲಿ 1,579 ಅಡಿಗೆ 3.911 ಟಿಂಸಿ ನೀರು ಸಂಗ್ರಹವಾಗಿದ್ದು, ರೈತರಲ್ಲಿನ ಭರವಸೆಗೆ ಕಾರಣವಾಗಿದೆ ಎನ್ನಲಾಗಿದೆ.