Post Views: 434
ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ವಿಜೃಂಭಣೆಯಿಂದ ನಡೆದ ಅಳಿಯ ಚನ್ನ ಬಸವೇಶ್ವರ ಜಾತ್ರೆ..!

ಕುಕನೂರು : ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ಉಚ್ಚಾಯ ಮಂಗಳವಾರ ಅದೂರಿಯಾಗಿ ಜರುಗಿತು.
ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮತ್ತು ಅನ್ನದಾನಿಶ್ವರ ಶಾಖಾ ಮಠದ ಶ್ರೀಗಳು ರಠೋತ್ಸವಕ್ಜೆ ಚಾಲನೆ ನೀಡಿದರು.
ನೂರಾರು ವರ್ಷಗಳ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿರುವ ಅಳಿಯ ಚನ್ನ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಉಚ್ಚಾಯ ಎಳೆಯುವ ಮೂಲಕ ವಿಜೃಂಭಣೆ ಯಿಂದ ನಡೆಯಿತು.
ಗುದ್ನೇಶ್ವರ ಮಠ ಮತ್ತು ಕೊನಾಪುರ ಗ್ರಾಮದ ಭಜನಾ ಮೇಳ ಮತ್ತು ಸಕಲ ಮಂಗಳ ವಾದ್ಯ ಮೇಳದೊಂದಿಗೆ ಮಂಗಳವಾರ ಸಂಜೆ ಸ್ವಾಮಿಯ ರಥೋತ್ಸವ ಜರುಗಿತು.
ಶ್ರಾವಣ ಮಾಸದ ತಿಂಗಳು ಪೂರ್ತಿ ಅಜ್ಜಯ್ಯನ ಮಠದಲ್ಲಿ ಅಳಿಯ ಚನ್ನ ಬಸವೇಶ್ವರ ಸ್ವಾಮೀಯ ಗದ್ದುಗೆಗೆ ಅಭಿಷೇಕ, ಧಾರ್ಮಿಕ ಪೂಜಾ ಕೈಂಕರ್ಯ ಗಳು ನಡೆದವು.
You Might Also Like
error: Content is protected !!