ಕುಕನೂರು : ತಾಲೂಕಿನ ಮಂಗಳೂರು ಗ್ರಾಮದ ಹೊನ್ನುಣಸಿ ರಸ್ತೆಯಲ್ಲಿರುವ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಂಗಳೂರು ಗ್ರಾಮದ ಹೊರವಲಯದಲ್ಲಿರುವ ಹಿರೇಹಳ್ಳಕ್ಕೆ ವರ್ಷದ ಹಿಂದೆ ಅಷ್ಟೆ ಬ್ರಿಜ್ಡ್ ಕಮ್ ಬ್ಯಾರೇಜ್‌ಅನ್ನು ನಿರ್ಮಾಣ ಮಾಡಲಾಗಿತ್ತು. ಇದರಿಂದ ಈ ಭಾಗದಿಂದ ಹಿರಿದು ಹೋಗುತ್ತಿರುವ ನೀರು ನಿಂತ ಇಲ್ಲಿನ ರೈತರಿಗೆ ಅನೂಕಲವಾಗಿತ್ತು. ಆದರೆ ಕಳೆದ ಒಂದು ತಿಂಗಳಿAದ ಬ್ರಿಜ್ಡ್ಗೆ ಅಳವಡಿಸಿರು ಕ್ರಿಸ್ಟ್ ಗೇಡ್‌ಗಳನ್ನು ಕಿಡಿಗೇಡಿಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೇ ಶುಕ್ರವಾರ ರಾತ್ರಿ ಬ್ಯಾರೇಜ್‌ನಲ್ಲಿದ್ದ ಸುಮಾರು ೨೦ ಗಟ್‌ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಅಲ್ಲಿನ ರೈತ ಹಾಗೂ ಗ್ರಾಮದ ಯುವಕರು ಆರೋಪಿಸುತ್ತಿದ್ದಾರೆ. ಅಲ್ಲದೇ ಕಳ್ಳತನವಾಗಿದ್ದಕೆ ಯಾರು ಹೊಣೆ ಎಂದು ಪ್ರಶ್ನೇಯನ್ನು ಸಹ ಎತ್ತಿದ್ದಾರೆ. ಈ ಕುರಿತು ಬೇವೂರು ಪೋಲಿಸ್ ಠಾಣೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.