BREAKING : ಪಟ್ಟಣದ ಅಲಂಕಾರಿಕ ಬೀದಿ ದೀಪ ಕಂಬಕ್ಕೆ ವಾಹನ ಡಿಕ್ಕಿ : ಐದು ದಿನ ಕಳೆದರೂ ದೂರು ನೀಡದ ಅಧಿಕಾರಿಗಳು..!!

You are currently viewing BREAKING : ಪಟ್ಟಣದ ಅಲಂಕಾರಿಕ ಬೀದಿ ದೀಪ ಕಂಬಕ್ಕೆ ವಾಹನ ಡಿಕ್ಕಿ : ಐದು ದಿನ ಕಳೆದರೂ ದೂರು ನೀಡದ ಅಧಿಕಾರಿಗಳು..!!
ಕಳೆದ ಸೇ 23 ರಂದು ಕ್ರೂಸರ್ ಕ್ಯಾಕ್ಸಿ ಅಲಂಕಾರಿಕ ಬೀದಿ ದೀಪ ಕ್ಕೆ ಡಿಕ್ಕಿ ಹೊಡೆದಿರುವ ಚಿತ್ರ

ಪ್ರಜಾ ವೀಕ್ಷಣೆ ವಿಶೇಷ ವರದಿ : 

ಸಾರ್ವಜನಿಕ ಚರ್ಚೆಗೆ ಗ್ರಾಸವಾಗುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ನಡೆ..!!

BREAKING : ಪಟ್ಟಣದ ಬೀದಿ ದೀಪ ಕಂಬಕ್ಕೆ ವಾಹನ ಡಿಕ್ಕಿ; ಮೂರು ದಿನ ಕಳೆದರೂ ದೂರು ನೀಡದ ಅಧಿಕಾರಿಗಳು..!!

ಕುಕನೂರು : ಪಟ್ಟಣದ ಯಲಬುರ್ಗಿ ರಸ್ತೆಯಲ್ಲಿರುವ ಎಸ್ ಎಫ್ ಶಾಲೆಯ ಮುಂಭಾಗದಲ್ಲಿ ಇತ್ತೀಚಿಗೆ ಅಷ್ಟೇ ಅಳವಡಿಸಿರುವ ಬೀದಿ ದೀಪದ ವಿದ್ಯುತ್ ಕಂಬಕ್ಕೆ ಕ್ರೂಸರ್  ಟ್ರ್ಯಾಕ್ಸ್ ವಾಹನ ಒಂದು ಸೆಪ್ಟೆಂಬರ್ 23ರಂದು ಬೆಳಗಿನ ಜಾವ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಬೀದಿ ದೀಪದ ಕಂಬ ನೆಲಕ್ಕುರಳಿದ್ದು, 5 ದಿನಗಳು ಕಳೆದರು ಇಲ್ಲಿಯ ತನಕ ಪಟ್ಟಣ ಪಂಚಾಯಿತಿ ಕಾರ್ಯಾಲಯವು ದೂರು ನೀಡದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ ಸೇ 23 ರಂದು ಕ್ರೂಸರ್ ಕ್ಯಾಕ್ಸಿ ಅಲಂಕಾರಿಕ ಬೀದಿ ದೀಪ ಕ್ಕೆ ಡಿಕ್ಕಿ ಹೊಡೆದಿರುವ ಚಿತ್ರ

      ಪಟ್ಟಣದ ಗುರುಕುಲ ವಿದ್ಯಾನಂದ ವಿದ್ಯಾಲಯದಿಂದ ಯಲಬುರ್ಗಾ ರಸ್ತೆಯಲ್ಲಿರುವ ಎಸ್ ಎಫ್ ಶಾಲೆಯವರೆಗೆ ಇತ್ತೀಚಿನ ಕೆಲವೇ ತಿಂಗಳುಗಳ ಹಿಂದೆ ನೂತನವಾಗಿ ಬೀದಿ ಬದಿ ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸಿದ್ದು ಸೆಪ್ಟೆಂಬರ್ 23 ರಂದು ಬೆಳಗಿನ ಜಾವ ಯಲಬುರ್ಗಾ ಪಟ್ಟಣದ ಕಡೆಯಿಂದ ಕುಕನೂರು ಪಟ್ಟಣದ ಕಡೆಗೆ ಆಗಮಿಸುತ್ತಿದ್ದ ಟ್ರ್ಯಾಕ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ನೂತನವಾಗಿ ನಿರ್ಮಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೀದಿಬದಿ ವಿದ್ಯುತ್ ದೀಪದ ಕಂಬ ನೆಲಕುರಳಿದ್ದು, ಕಂಬಕ್ಕೆ ಗುದ್ದಿದ ಟ್ರ್ಯಾಕ್ಸ್ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದೆ ಆದರೆ ವಿಪರ್ಯಾಸವೇ ಏನೆಂದರೆ ಘಟನೆ ಸಂಭವಿಸಿ ಸುಮಾರು ಐದು ದಿನಗಳು ಕಳೆದರೂ ಸಹ ಪಟ್ಟಣ ಪಂಚಾಯಿತಿಯ ಅಧಿಕಾರಿಗಳಾಗಲಿ ಯಾವ ಸಿಬ್ಬಂದಿಯಾಗಲಿ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡದೇ ಇರುವುದು ಹಲವಾರು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು ಪಟ್ಟಣದ ಸಾರ್ವಜನಿಕರಲ್ಲಿ ತೀವ್ರ ತರಹದ ಚರ್ಚೆಗೆ ಗ್ರಾಸವಾಗಿದೆ.

    ಕೆಲವು ಸಾರ್ವಜನಿಕರು ಮಾತನಾಡುವ ಪ್ರಕಾರ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ಸೇರಿದಂತೆ ಕೆಲವರು ವಾಹನದ ಮಾಲೀಕರೊಂದಿಗೆ ಚರ್ಚಿಸಿ ಒಳಗೊಳಗೆ ಒಂದು ಮೊತ್ತವನ್ನು ನಿರ್ಧರಿಸಿ ತೆಗೆದುಕೊಂಡು ಸುಮ್ಮನಾದರೆ ಆದ್ದರಿಂದ ದೂರು ನೀಡುವ ಕಾರ್ಯವಾಗುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಪ್ರಭಾವಿ ವ್ಯಕ್ತಿಗಳ ಮಾಲೀಕತ್ವ ಹೊಂದಿದ್ದ ವಾಹನ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಅವರ ವಿರುದ್ಧ ದೂರು ನೀಡುವ ಧೈರ್ಯ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಇಲ್ಲ ಆದ್ದರಿಂದ ಮೌನಕ್ಕೆ ಶರಣಾಗಿದ್ದಾರೆ ಎಂದು ಸಹ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಕುಕನೂರು ಪೊಲೀಸ್ ಠಾಣೆಯಲ್ಲಿ ನಿಂತಿರುವ ಕ್ರೂಸರ್ ಕ್ಯಾಕ್ಸಿ ಇಂದಿನ (ಸೆಪ್ಟೆಂಬರ್ 27) ಚಿತ್ರ.

  ಇದರ ನಡುವೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ನಬಿಸಾಬ್ ಕಂದಗಲ್ ಅವರನ್ನು ವರದಿಗಾರರು ಪ್ರಶ್ನಿಸಿದಾಗ ಇದರಲ್ಲಿ ನನ್ನ ಪಾತ್ರವೇನು ಇಲ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ದೂರು ನೀಡುವುದ ಬೇಡ ಅಲ್ಲಿ ಉಂಟಾಗಿರುವ ನಷ್ಟವನ್ನು ಭರಿಸಿಕೊಳ್ಳುವ ವಿಚಾರ ಮಾಡೋಣ ಎಂದು ಎಂದು ಹೇಳಿದರೆ ಆದ್ದರಿಂದ ಕಾದು ನೋಡುವ ಕಾರ್ಯಕ್ಕೆ ಮೂರೇ ಹೋಗಿದ್ದೇವೆ ಎಂದು ಆಶ್ಚರ್ಯಕರ ಹಾಗೂ ದಾರಿ ತಪ್ಪಿಸುವ ನಿಟ್ಟಿನಲ್ಲಿ ಉತ್ತರವನ್ನು ನೀಡಿರುತ್ತಾರೆ.

ದುರಸ್ತಿ ಆಗದ ಅಲಂಕಾರಿಕ ವಿದ್ಯುತ್ ಬೀದಿ ದೀಪ ಇಂದಿನ ಸೆಪ್ಟೆಂಬರ್ 27 ರ ಚಿತ್ರ

   ಇದೆಲ್ಲವನ್ನು ಗಮನಿಸಿದಾಗ ತೆರೆಮರೆಯಲ್ಲಿ ಏನೋ ಒಂದು ಕಸರತ್ತು ನಡೆಯುತ್ತಿದೆ ಎಂದು ಗೋಚರಿಸುತ್ತಿದ್ದು ಸಾರ್ವಜನಿಕರ ಹಣದಿಂದ ನಿರ್ಮಾಣಗೊಂಡಿರುವ ವಿದ್ಯುತ್ ದೀಪದ ಕಂಬಕ್ಕೆ ಹಾನಿಗೊಳಗಾಗಿದೆ ಇದನ್ನು ಸಮರ್ಪಕವಾಗಿ ನಿಭಾಯಿಸಬೇಕಾದ ಅಧಿಕಾರಿಗಳೇ ಜಾಣ ಕುರುಡರ ರೀತಿ ವರ್ತಿಸುತ್ತಿರುವುದು ಗೊಂದಲಗಳನ್ನು ಸೃಷ್ಟಿ ಮಾಡಿದ್ದು ಇದಕ್ಕೆ ಸಾರ್ವಜನಿಕವಾಗಿ ತೆರೆ ಬೀಳುವುದೇ…..? ಅಥವಾ ತೆರೆಮರೆಯಲ್ಲಿಗೆ ಹೊಂದಾಣಿಕೆಯಾಗುತ್ತದೆಯೇ….? ಎಂಬುದು ಸಾರ್ವಜನಿಕರಲ್ಲಿ ಯಕ್ಷಪ್ರಶ್ನೆಯಾಗಿದ್ದು. ಕಾಲವೇ ಎಲ್ಲಾದಕ್ಕೂ ಉತ್ತರ ನೀಡಲಿದೆ.

ಪ್ರಜಾ ವೀಕ್ಷಣೆ ನಿಷ್ಠುರ ವರದಿ…… ಇನ್ನು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ….

Leave a Reply

error: Content is protected !!