ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜಶೇಖರ್ ಹಿಟ್ನಾಳ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ.!!

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜಶೇಖರ್ ಹಿಟ್ನಾಳ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ.!!

ಕೊಪ್ಪಳ : ತಾಲೂಕಿನಲ್ಲಿ ವಿವಿಧ ಪಕ್ಷಗಳ, ಸಂಘ ಸಂಸ್ಥೆಗಳ ಮುಖಂಡರು ಕಾಂಗ್ರೆಸ್ ಪಕ್ಷದ ಕಡೆ ಒಬ್ಬೊಬ್ಬರಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಅದರಂತೆ ಇಂದೂ ಕೂಡಾ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಕಟ್ಟಡ ಕಾರ್ಮಿಕರ ಕಮ್ಯುನಿಸ್ಟ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ತುಕಾರಾಂ ಬಿ ಪಾಟ್ರೋಟಿ, ಜಿಲ್ಲಾ ಸಂಚಾಲಕ ಎಸ್ ಐ ಗಫಾರ್, ಕಾರ್ಯದರ್ಶಿ ಹುಲಗಪ್ಪ, ಚೆನ್ನಪ್ಪ, ನೂರ್ ಸಾಬ್ ಹೊಸಮನಿ, ಜಿಲ್ಲಾ ಪಾಡ್ರಿಗಳ ಸಂಘದ ಚೆನ್ನಬಸಪ್ಪ ಇತರರು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕಾಟನ್ ಪಾಷಾ, ಯುವ ಮುಖಂಡ ಕೆ ಸೋಮಶೇಖರ್ ಹಿಟ್ನಾಳ್ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!