KOPPAL NEWS : ಆರ್ ಎಸ್ ಎಸ್ ಒಪ್ಪಿಕೊಳ್ಳುವವರು ದೇಶದ್ರೋಹಿಗಳು : ಸಚಿವ ತಂಗಡಗಿ
ಕೊಪ್ಪಳ : ರಾಷ್ಟ್ರೀಯ ಸ್ವಯಂಸೇವಾ ಸಂಘವನ್ನು ಒಪ್ಪಿಕೊಳ್ಳುವವರು ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಅವರು ಪಕ್ಕ ದೇಶದ್ರೋಹಿಗಳು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳದ ಪ್ರವೀಕ್ಷಣ ಮಂದಿರದಲ್ಲಿ ವರದಿಗಾರರೊಂದಿಗೆ ಸಚಿವ ಶಿವರಾಜ ತಂಗಡಗಿ ಮಾತನಾಡುತ್ತ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಆಗುತ್ತೆ ದೇಶದ ಧ್ವಜ ಮತ್ತು ರಾಷ್ಟ್ರಗೀತೆ ಒಪ್ಪದ ಆರ್ ಎಸ್ ಎಸ್ ನವರು ಯಾವ ಅರ್ಥದಿಂದ ದೇಶಪ್ರೇಮಿ ಸಂಸ್ಥೆ ಎಂದು ಕರೆಯಬೇಕು ಎಂಬುದು ಪ್ರತಿಯೊಬ್ಬರ ಮನಸ್ಸಿನ ಪ್ರಶ್ನೆಯಾಗಿದೆ ಎಂದು ಹೇಳಿದರು.
ಆರ್ ಎಸ್ ಎಸ್ ಸಂಘದ ಪ್ರಧಾನ ಕಾರ್ಯದ ಮೇಲೆ ರಾಷ್ಟ್ರಧ್ವಜವನ್ನು ಇಂದಿಗೂ ಆರಿಸಲು ಅವಕಾಶ ಮಾಡಿಕೊಟ್ಟಿಲ್ಲ ಹಾಗೂ ಪತ ಸಂಚಲನದಲ್ಲಿ ್‌ಎಸ್ ನವರು ಕೋಲು ಹಿಡಿದುಕೊಂಡು ಪತಸಂಚಲನ ಮಾಡುತ್ತಾರೆ ಅದೇ ರೀತಿ ಬೇರೆ ಯಾರಾದರೂ ಕೋಲು ಅಥವಾ ಇನ್ಯಾವುದೋ ಆಯುಧ ರೀತಿಯ ವಸ್ತುವನ್ನು ಹಿಡಿದು ಹೋದರೆ ಅವರ ಮೇಲೆ ದೂರು ದಾಖಲೆ ಮಾಡಿಸುತ್ತೀರಿ ಆದರೆ ಆರ್‌ಎಸ್‌ಎಸ್ ನವರ ವರ್ತನೆಯನ್ನು ನೋಡಿ ದೇಶ ಭಕ್ತರು ಎಂದು ಹೇಳುತ್ತೀರಿ. ಆದರೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಆಗಿದ್ದಾರೆಯೇ ಇಂದು ಪ್ರಶ್ನಿಸುತ್ತ ಇದುವರೆಗೂ ಆರ್ ಎಸ್ ಎಸ್ ಸಂಸ್ಥೆ ನೊಂದಣಿಗೆ ಆಗಿಲ್ಲ. ಹಾಗೂ ಆರ್ ಎಸ್ ಎಸ್ ದೇಶಭಕ್ತಿ ಸಂಸ್ಥೆಯೇ ಅಲ್ಲ ಇದೊಂದು ಕೋಮುವಾದಿ ಸಂಸ್ಥೆಯಾಗಿದ್ದು ಇವರು ಸ್ವಲ್ಪನಾದರೂ ದೇಶಭಕ್ತಿ ಹೊಂದಿದಲ್ಲಿ ತಮ್ಮ ಮತ ಸಂಚಲನದಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಹೆಮ್ಮೆಯಿಂದ ಸಾಗಲಿ ನೋಡೋಣ ಎಂದು ಹೇಳಿದರು.
ವಿರೋಧಪಕ್ಷದವರು ಸುಖ ಸುಮ್ಮನೆ ಪ್ರಿಯಾಂಕ ಖರ್ಗೆ ಅವರ ಮೇಲೆ ಆರ್ ಎಸ್ ಎಸ್ ಬ್ಯಾನ್ ಮಾಡಿ ಎಂದು ಹೇಳಿದ್ದಾರೆ ಎನ್ನುತ್ತಾ ಆರೋಪ ಮಾಡುತ್ತಿದ್ದು ಅವರು ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾರೇ ಕಾರ್ಯಕ್ರಮ ಮಾಡಿದರು ಅನುಮತಿ ಪಡೆದುಕೊಂಡು ಮಾಡಲಿ ಎಂದು ಹೇಳಿದ್ದಾರೆ ಅವರದ್ದು ಆರ್ ಎಸ್ ಎಸ್ ಬ್ಯಾನ್ ಮಾಡುವಂತೆ ಹೇಳಿರುವುದಿಲ್ಲ ಎಂದು ಪ್ರಿಯಾಂಕ ಖರ್ಗೆ ಅವರನ್ನು ಸಮರ್ಪಿಸಿಕೊಂಡರು.