ಗಂಗಾವತಿ : ತಾಲೂಕಿನ ಮಲಕನಮರಡಿ ವಸತಿ ಶಾಲೆಯಲ್ಲಿ ಇತ್ತೀಚಿಗೆ ನಡೆದ ಬಸಾಪಟ್ಟಣ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಲಕನಮರಡಿ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ಬಾಲಕಿಯರ ಗುಂಪು ಆಟಗಳಲ್ಲಿ ಖೋ ಖೋ ಆಟದಲ್ಲಿ ಭೂಮಿಕ ಮತ್ತು ತಂಡ ಪ್ರಥಮ ಸ್ಥಾನ ಬಾಲಕಿಯರ ವೈಯಕ್ತಿಕ ಆಟಗಳು ಕುಮಾರಿ ದೀಪ ಆರ್. ಕೆ.100 ಮೀಟರ್ ಓಟ ಪ್ರಥಮ 200 ಮೀಟರ್ ಓಟದಲ್ಲಿ ಪ್ರಥಮ ತ್ರಿವಿಧ ಜಿಗಿತ ಪ್ರಥಮ ಕುಮಾರಿ ಭೂಮಿಕಾ 100 ಮೀಟರ್ ಓಟ ದ್ವಿತೀಯ 200 ಮೀಟರ್ ಓಟ ದ್ವಿತೀಯ ಉದ್ದ ಜಿಗಿತ ಪ್ರಥಮ 400 ಮೀಟರ್ ಓಟ ಕುಮಾರಿ ಕೀರ್ತನ ದ್ವಿತೀಯ 800 ಮೀಟರ್ ಓಟ ಕುಮಾರಿ ಮಲ್ಲಮ್ಮ ದ್ವಿತೀಯ ಜಾವಲಿನ್ ಎಸೆತ ದ್ವಿತೀಯ ಕುಮಾರಿ ಇಂಚರ ತ್ರಿವಿಧ ಜಿಗಿತ ದ್ವಿತೀಯ ಗುಂಡು ಎಸೆತ ಪ್ರಥಮ ಜಾವಲಿನ್ ಎಸೆತ ಪ್ರಥಮ ಕುಮಾರಿ ತ್ರಿವೇಣಿ 1500 ಮೀಟರ್ ಓಟ ದ್ವಿತೀಯ 3000 ಮೀಟರ್ ನಡಿಗೆ ದ್ವಿತೀಯ ಕುಮಾರಿ ಪೂಜಾ 800 ಮೀಟರ್ ಓಟ ದ್ವಿತೀಯ ಕುಮಾರಿ ಶಶಿಕಲಾ 1500 ಮೀಟರ್ ಓಟ ದ್ವಿತೀಯ ಕುಮಾರಿ ಪವಿತ್ರ ಚಕ್ರ ಎಸೆತ ಪ್ರಥಮ ಕುಮಾರಿ ಕಲ್ಪನಾ ದ್ವಿತೀಯ 4*100 ಮೀಟರ್ ರಿಲೇ ಕುಮಾರಿ ಪ್ರಿಯಾಂಕ ಮತ್ತು ತಂಡ ಪ್ರಥಮ 4*400 ಮೀಟರ್ ರಿಲೇ ಕುಮಾರಿ ಪವಿತ್ರ ಮತ್ತು ತಂಡ ಪ್ರಥಮ ಕುಮಾರಿ ದೀಪ ಆರ್ ಕೆ ವೀರಾಗ್ರಣಿ ಪ್ರಶಸ್ತಿ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿರುತ್ತಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲ ಮಲ್ಲಿಕಾರ್ಜುನ್ ಪಾಟೀಲ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸಿದ್ದಪ್ಪ ಗಂಗಾವತಿ ಹಾಗೂ ನಿಲಯ ಪಾಲಕರಾದ ಶ್ರೀಮತಿ ಲಕ್ಷ್ಮಿ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿರುತ್ತಾರೆ.