‘ಶಿಕ್ಷಕರಾದವರ ಸತತ ಪ್ರಯತ್ನದಿಂದ ಶಿಕ್ಷಣ, ಗುಣ-ನಡೆತ & ಜೀವನ ಕೌಶಲ್ಯದಲ್ಲಿ ಒಬ್ಬ ವಿದ್ಯಾರ್ಥಿ ಪರಿಪೂರ್ಣನಾಗಲು ಸಾಧ್ಯ’ : ಸಹ ಶಿಕ್ಷಕ ಶಂಭು
ಕುಕನೂರು : ‘ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರಾದವರ ಸತತ ಪ್ರಯತ್ನದಿಂದ ಶಿಕ್ಷಣ, ಗುಣ-ನಡೆತ & ಜೀವನ ಕೌಶಲ್ಯದಲ್ಲಿ ಒಬ್ಬ ವಿದ್ಯಾರ್ಥಿ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಲು ತಂದೆ-ತಾಯಿ ಬಿಟ್ಟರೇ ಶಿಕ್ಷಕನೇ ಮೊದಲ ‘ಗುರು’, ಹಾಗಾಗಿ ಮಕ್ಕಳು ಶಿಕ್ಷಕರಲ್ಲಿ ದೇವರನ್ನು ಕಾಣುತ್ತಾರೆ ಎಂದು ಶಿಕ್ಷಕ ಶಂಭು ಹೇಳಿದರು.
ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕಿಹಳ್ಳಿಯಲ್ಲಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿಯ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ಮಾತನಾಡಿ, ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಬಾಲ್ಯದ ಜೀವನ, ಶಿಕ್ಷಣ, ಶಿಕ್ಷಕ ವೃತ್ತಿ ಹಾಗೂ ಅವರಿದ್ದ ಜೀವನದ ಬಗ್ಗೆ ಮಾಹಿತಿ ನೀಡಿದರು. ಚ
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮನ್ನಾಪೂರ, ಮುಖ್ಯೋಪಾಧ್ಯಾಯ ಪ್ರಭು ಗುರಿಕಾರ್, ಸಹ ಶಿಕ್ಷಕಿರಾದ ಶ್ರೀಮತಿ ಲಲಿತಾ, ಶ್ರೀಮತಿ ಬಸಮ್ಮ, ಶ್ರೀಮತಿ ಸಂದಾವಳಿ, ಶ್ರೀಮತಿ ವೀಣಾ, ಶ್ರೀಮತಿ ಅಕ್ಕಮ್ಮಾದೇವಿ, ಶ್ರೀಮತಿ ಮಂಜುಳಾ, ಕಾರ್ಯಕ್ರಮದ ವಂದನಾರ್ಪಣೆಯನ್ನು ಶಿಕ್ಷಕ ರವಿಸ್ವಾಮಿ ಹೀರೆಮಠ ನಡೆಸಿಕೊಟ್ಟರು, ಪರ್ತಕರ್ತ ಚಂದ್ರು ಆರ್ ಭಾನಾಪೂರ್ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.