LOCAL NEWS : ರಸಗೊಬ್ಬರಗಳ ಬಳಕೆ ಬಗ್ಗೆ ಮಾಹಿತಿ ಕೃಷಿ ಸಂಜೀವಿನಿ ವಾಹನದ ಮೂಲಕ ವಿವಿಧ ಗ್ರಾಮಗಳಲ್ಲಿ ಪ್ರಚಾರ!
ಕುಕನೂರ : ತಾಲೂಕಿನ ಮುಂಗಾರು ಹಂಗಾಮಿನ ಹೆಸರು,ಮೆಕ್ಕೆಜೋಳ, ತೊಗರಿ, ಶೇಂಗಾ, ಅಲಸಂಧಿ, ನವಣೆ ಸೂರ್ಯಕಾಂತಿ ಬೀತನೆಯಾಗಿದು ಕುಕನೂರ ಹೋಬಳಿ ವ್ಯಾಪ್ತಿಯ ಮಸಹಂಚಿನಾಳ, ತಳಕಲ್ಲ,ಕುಕನೂರ, ಮಂಡಲಗೇರಿ, ಇಟಗಿ, ಭಾನಾಪುರ,ಬೆಣಕಲ್ಲ ಮಂಡಲಗೇರಿ, ಯರೇಹಂಚಿನಾಳ, ವೀರಾಪುರ ಗ್ರಾ.ಪಂಗಳ ಎಲ್ಲಾ ಗ್ರಾಮಗಳಲ್ಲಿ ಹೆಸರು, ಮೆಕ್ಕೆಜೋಳ, ತೊಗರಿ, ಅಲಸಂಧಿಯಲ್ಲಿ ಕಂಡುಬರುವ ಪ್ರಮುಖ ಕೀಟ ಮತ್ತು ರೋಗಭಾಧೆ ಕುರಿತು ಮುಂಜಾಗೃತೆ ಕ್ರಮದ ಬಗ್ಗೆ ನಾನೋ ಯೂರಿಯಾ ರಸಗೊಬ್ಬರದ ಮಹತ್ವದ ಬಗ್ಗೆ ಮತ್ತು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಕೆಯ ಬಗ್ಗೆ ರೈತ ಸಂಪರ್ಕ ಕೇಂದ್ರ ಕುಕನೂರ ಕೃಷಿ ಸಂಜೀವಿನಿ ವಾಹನದ ಮೂಲಕ ಪ್ರಚಾರ ಮಾಡಿದರು.
ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಗೂಳಪ್ಪ ಕೊಳಜಿ ಸಂಯುಕ್ತ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿ ನ್ಯಾನೊ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ. ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೋ ಯೂರಿಯಾ ಬಳಸಿದರೆ ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ 50 ರಷ್ಟು ಕಡಿಮೆ ಮಾಡಬಹುದು.ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಕೆಮಾಡಬಹುದು.
ಸಸ್ಯಗಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ.ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶಗಳ ಒದಗಿಸುವ ಯೂರಿಯಾ ಹಾಗೂ ಡಿಎಪಿ ಯನ್ನು ರೂಢಿಗತವಾಗಿ ಬಳಸುತ್ತಿದ್ದು ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಇರುತ್ತದೆ. ಆದರೆ ಬೆಳೆಗಳಿಗೆ ಬರಿ ರೋಗನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಂಶ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸಾರಜನಕ,ರಂಜಕ ಮತ್ತು ಪೋಟ್ಯಾಶಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದುಶೀಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ. ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕೊದಗಿಸುವ 20-20-0-13 ಮತ್ತು ಪೋಟ್ಯಾಷ್ ಒದಗಿಸುವ 15-15-15,10-26-26 ಇತ್ಯಾದಿ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಗೂಳಪ್ಪ ಕೊಳಜಿ , ಕೃಷಿ ಸಂಜೀವಿನಿ ಸಿಬ್ಬಂದಿ ಹನುಮವ್ವ, ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.