LOCAL NEWS : ಕೃಷಿ ಜಮೀನಿನಲ್ಲಿ ರಸ್ತೆ : ಪಟ್ಟಣ ಪಂಚಾಯಿತಿ ವಿರುದ್ಧ ರೈತನ ಆರೋಪ..!!

You are currently viewing LOCAL NEWS : ಕೃಷಿ ಜಮೀನಿನಲ್ಲಿ ರಸ್ತೆ : ಪಟ್ಟಣ ಪಂಚಾಯಿತಿ ವಿರುದ್ಧ ರೈತನ ಆರೋಪ..!!

ಪ್ರಜಾ ವೀಕ್ಷಣೆ ಸುದ್ದಿ:-

LOCAL NEWS : ಕೃಷಿ ಜಮೀನಿನಲ್ಲಿ ರಸ್ತೆ : ಪಟ್ಟಣ ಪಂಚಾಯಿತಿ ವಿರುದ್ಧ ರೈತನ ಆರೋಪ..!!

ಕುಕನೂರು : ಕುಕನೂರು ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯವು ಕಸ ವಿಲೇವಾರಿ ಘಟಕಕ್ಕೆ ತೆರಳಲು ಕೃಷಿ ಜಮೀನಿನಲ್ಲಿ ಮನಸೋ ಇಚ್ಚೆ ರಸ್ತೆ ನಿರ್ವಹಿಸಿಕೊಂಡಿದ್ದು ಇದರಿಂದ ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಸಂಪೂರ್ಣವಾಗಿ ತೊಂದರೆ ಉಂಟಾಗುತ್ತಿದೆ ಎಂದು ಕುಕನೂರು ಪಟ್ಟಣದ ರೈತ ಈರಪ್ಪ ಲಕ್ಷ್ಮಪ್ಪ ಬೆದವಟ್ಟಿ ಆರೋಪ ಮಾಡಿರು516ತ್ತಾರೆ.

ಪಟ್ಟಣ ಪಂಚಾಯತಿ ಕಾರ್ಯಾಲಯದಿಂದ ಕಸ ವಿಲೇವಾರಿ ಘಟಕದ ನಿರ್ಮಾಣಕ್ಕೆ ಸರ್ವೇ ನಂಬರ್ 429/6 ಮತ್ತು ೪೨೯/೨ ರಲ್ಲಿ ಜಮೀನು ಖರೀದಿಸಿದ್ದು ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದ್ದಾರೆ ಈ ನಿರ್ಮಾಣ ಕಾರ್ಯಕ್ಕೆ ನಮ್ಮ ಜಮೀನಿನಲ್ಲಿ ಸರ ನಂಬರ್ 429/1 ರ 5 ಎಕರೆ 15 ಗುಂಟೆ ಕೃಷಿ ಜಮೀನಿನಲ್ಲಿ ನಮಗೆ ತಿಳಿಯದಂತೆ ಹಾಗೂ ನಮ್ಮ ಅನುಮತಿ ಪಡೆಯದೆ ತಮಗೆ ಬೇಕಾದಲ್ಲಿ ರಸ್ತೆ ಮಾಡಿಕೊಂಡು ಬೇಕಾಬಿಟ್ಟಿಯಾಗಿ ಬರಿ ವಾಹನಗಳನ್ನು ಚಲಾಯಿಸುತ್ತಾ ಉಸುಕು, ಕಲ್ಲಿನ ಪುಡಿ, ಕಂಕರ್ ಪುಡಿ ಹಾಕಿದ್ದು ಇದರ ಪರಿಣಾಮದಿಂದ ನಮ್ಮ ಜಮೀನು ಸಂಪೂರ್ಣವಾಗಿ ಹಾಳಾಗಿದ್ದು ಉಳಿಮೆ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ. ಇದಕ್ಕೆ ಪರಿಹಾರ ನೀಡುವಂತೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮನವಿ ಮಾಡಿಕೊಂಡಾಗ ಪರಿಹಾರ ನೀಡುವುದಾಗಿ ಒಪ್ಪಿಕೊಂಡಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 4-5 ತಿಂಗಳಿಂದ ವಿಕಲಚೇತನರಾದ ನನ್ನನ್ನು ಕಚೇರಿಗೆ ಅಲೆದಾಡಿಸಿಕೊಂಡು ಈಗ ನಮ್ಮ ಹೊಲದಲ್ಲಿಯೇ ರಸ್ತೆ ಇರುವುದಾಗಿ ಹಾಗೂ ಪರಿಹಾರವಾಗಿ ಏನನ್ನು ನೀಡುವುದಿಲ್ಲ ವೆಂದು ದೌರ್ಜನ್ಯ ವ್ಯಸಗಿರುತ್ತಾರೆ. ಇದರಿಂದ ಮಾನಸಿಕವಾಗಿ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ತಿಳಿಸಿ ಬಂದಿದ್ದು ಇದೀಗ ಕೊನೆಯ ಅವಕಾಶ ಎಂಬಂತೆ ರೈತ ಸಂಘದ ಸಂಘಟನೆಗಳಿಗೆ ಮನವಿ ನೀಡಿದ್ದೇನೆ ಎಂದು ತಿಳಿಸಿದರು.

ಸಂಕಷ್ಟದಲ್ಲಿರುವ ರೈತನ ಮನವಿಯನ್ನು ಸ್ವೀಕರಿಸಿದ ರಾಜ್ಯ ರೈತ ಸಂಘದ ಕುಕನೂರು ತಾಲೂಕ ಘಟಕದ ಅಧ್ಯಕ್ಷ ದೇವಪ್ಪ ಸೋಬಾನದ ಮಾತನಾಡುತ್ತ ಅಧಿಕಾರಿಗಳೊಂದಿಗೆ ಮತ್ತು ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.

ಈ ವೇಳೆಯಲ್ಲಿ ರೈತ ಸಂಘದ ಪ್ರಮುಖರು, ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

Leave a Reply

error: Content is protected !!