ದಲಿತ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಖಂಡಿಸಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ 

You are currently viewing ದಲಿತ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಖಂಡಿಸಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ 

ದಲಿತ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಖಂಡಿಸಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ 

ಮುಂಡರಗಿ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಂಗನಪಲೆಯಲ್ಲಿ ಹಿಂದೂ ಭೋವಿ ವಡ್ಡರ ದಲಿತ ಸಮುದಾಯದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದನ್ನು ಖಂಡಿಸಿ ಮುಂಡರಗಿ ತಹಶೀಲ್ದಾರ್ ಗ್ರೇಟ್ -2 ಮುಖಾಂತರ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಕಳೆದ ದಿನಾಂಕ 23-08-2024 ರಂದು ಶುಕ್ರವಾರದಂದು ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ರಂಗನಪಲೈಯಲ್ಲಿ ದಲಿತ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿದನ್ನು  ಕರ್ನಾಟಕ ರಾಜ್ಯ ಬೋವಿ ವಡ್ಡರ ಮಹಾಸಭಾ (ರಿ)ಮುಂಡರಗಿ ತೀವ್ರವಾಗಿ ಖಂಡಿಸುತ್ತದೆ.

ಗೃಹ ಸಚಿವರೆ ಇದಕ್ಕೆ ಉತ್ತರ ಕೊಡುವವರು ಯಾರು? ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಇಷ್ಟು ಅಮಾನವೀಯ ಗೊಂಡಿರಲು ಕಾರಣವೇನು?ಕೇವಲ ಒಂದೇ ವರ್ಷದ ಅವಧಿಯಲ್ಲಿ ಎರಡು ಯುವತಿಯರ ಕೊಲೆಯಾಗಿದ್ದು, ನೆನೆಪು ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತಹ ಮತ್ತೊಂದು ಹೀನಕೃತ್ಯ ನಡೆದಿದೆ.

ಇಲ್ಲಿ ಮಹಿಳೆಯರಿಗೆ ಅತ್ಯಾಚಾರ ಕೊಲೆ ಚಟುವಟಿಕೆಗಳು ಅಷ್ಟು ಸುಲಭವಾಗಿದೆಯೇ ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ಯಾವುದೇ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರನ್ನು ಗಲ್ಲಿಗೇರಿಸಬೇಕು. ಅಲ್ಲದೇ ಅತ್ಯಾಚಾರಕ್ಕೆ ಒಳಪಟ್ಟ ಸಹೋದರಿಯ ಹಾಗೂ ಅವರ ಕುಟುಂಬಕ್ಕೆ ಭದ್ರತೆಯನ್ನು ನೀಡಿ ಸರಕಾರದಿಂದ ಸ್ವಾಂತಾನಾ ಹಾಗೂ ಪರಿಹಾರ ನೀಡಲೆಬೇಕು.ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಉಗ್ರವಾಗಿ ಹೊರಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬೋವಿ ವಡ್ಡರ ಮಹಾಸಭದ ಗದಗ (ರಿ) ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ. ದುರಗಪ್ಪ. ಕಟ್ಟಿಮನಿ ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಬೋವಿ ವಡ್ಡರ ಮಹಾಸಭದ (ರಿ)ಮುಂಡರಗಿ ತಾಲೂಕ ಅಧ್ಯಕ್ಷರಾದ ಶ್ರೀ ಹನಮಪ್ಪ ಬಾಲಪ್ಪ ವಡ್ಡರ.ಮತ್ತು ಸದಸ್ಯರಾದ ವಾಸು ಬಾದಾಮಿ, ಮಂಜುನಾಥ ಗುಗ್ಗರಿ, ವೆಂಕಟೇಶ ಶಿಂದೋಗಿ, ಸಂತೋಷ ಶಿಂದೋಗಿ, ಕನಕರಾಯ ಕಟ್ಟಿಮನಿ, ನಾಗಪ್ಪ ಬಂಡಿವಡ್ಡರ, ಶಿವು ಗೊಂಡಬಾಳ, ಈರಪ್ಪ ಸಂದಿಮನಿ, ಮಾಂತೇಶ ಬಂಡಿವಡ್ಡರ, ದೇವರಾಜ ಬಂಡಿವಡ್ಡರ, ಬಸವರಾಜ ಬಂಡಿವಡ್ಡರ, ಬೀಮೇಶ ಬಂಡಿವಡ್ಡರ.ಮಾಂತೇಶ ಕಟ್ಟಿಮನಿ, ಕನಕರಾಯ ಬಂಡಿವಡ್ಡರ, ಮಂಜು ದೊಡ್ಡಮನಿ. ಈರಣ್ಣ ಬಂಡಿವಡ್ಡರ, ಫಕ್ಕೀರೇಶ ಗದಗ. ಭಾಗವಹಿಸಿದ್ದರು.

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!