ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ : ತಾ.ಪಂ ಇಓ ಕೆ.ರಾಜಶೇಖರ್
ತಾಲೂಕಾ ಪಂಚಾಯತ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ.
ಕನಕಗಿರಿ : ಮಹರ್ಷಿ ವಾಲ್ಮೀಕಿಯವರ ಜ್ಞಾನ, ಚಿಂತನೆ ಈ ಸಮಾಜದಲ್ಲಿ ಎಂದಿಗೂ ಅನುಕರಣೀಯ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.
ಬಳಿಕ ಮಾತನಾಡಿದ ಅವರು, ತಾಲೂಕಾ ಪಂಚಾಯತ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿ ಮಾತನಾಡಿದರು. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕಿ ಶರಪೋನ್ನಿಸಾ ಬೇಗಂ, ವಿಷಯ ನಿರ್ವಾಹಕರಾದ ಕೊಟ್ರಯ್ಯಸ್ವಾಮಿ, ಕೆ.ಪವನಕುಮಾರ್, ಯಂಕೋಬ, ಎಫ್.ಡಿಎ ಹನುಮಂತ ಸೇರಿದಂತೆ ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.