ಬರ ಪರಿಹಾರಕ್ಕಾಗಿ FID
ಯಲಬುರ್ಗಾ-ಕುಕನೂರ : ಯಲಬುರ್ಗಾ ತಾಲೂಕಿನಲ್ಲಿ ಒಟ್ಟು 69302 ಹಾಗೂ ಕುಕನೂರ ತಾಲೂಕಿನಲ್ಲಿ ಒಟ್ಟು 54112 ರೈತರ ತಾಕುಗಳು “ಭೂಮಿ” ಪ್ರಕಾರ: ದಾಖಲಾಗಿರುತ್ತವೆ. ಇವುಗಳಲ್ಲಿ ಯಲಬುರ್ಗಾ ತಾಲೂಕಿನ 49187 ರೈತರ ತಾಕುಗಳು ಹಾಗೂ ಕುಕನೂರ ತಾಲೂಕಿನ 39899 ರೈತರ ತಾಕುಗಳು FID ಗೆ ಜೋಡಣೆಯಾಗಿದ್ದು, ಯಲಬುರ್ಗಾ ತಾಲೂಕಿನ 20112 ಹಾಗೂ ಕುಕನೂರ ತಾಲೂಕಿನ 14213 ರೈತರ ತಾಕುಗಳು FID 1 ಜೋಡಣೆಯಾಗುವುದು ಬಾಕಿ ಇರುತ್ತವೆ.
2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪರಿಹಾರಕ್ಕಾಗಿ ಈ ಎಲ್ಲ ರೈತರ ತಾಕುಗಳು FID ಗೆ ಜೋಡಣೆ ಆಗುವುದು ಅತಿ ಅವಶ್ಯವಾಗಿರುತ್ತದೆ. ಅಲ್ಲದೇ ಬ್ಯಾಂಕಗಳಲ್ಲಿ ಸಾಲದ ಸೌಲಭ್ಯ ಪಡೆಯಲು, ಬೆಳೆ ವಿಮೆ ಪಡೆಯಲು, ಪಿ.ಎಂ ಕಿಸಾನ ಯೋಜನೆಯ ಲಾಭ ಪಡೆಯಲು, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆಯ ಹಾಗೂ ವಿವಿಧ ಇಲಾಖೆಗಳ ಯೋಜನೆ ಲಾಭ ಪಡೆಯಲು FID ಅತಿ ಅವಶ್ಯವಾಗಿರುತ್ತದೆ.
FID ಮಾಡಿಸದೆ ಇರುವ ರೈತರು ಹಾಗೂ ರೈತರು ತಮ್ಮ ಎಲ್ಲ ತಾಕುಗಳನ್ನು FID ಗೆ ಜೋಡಣೆ ಮಾಡಿಸದೆ ಇದ್ದರೆ ಬರ ಪರಿಹಾರ ಸೌಲಭ್ಯ ಹಾಗೂ ಇತರೆ ಇಲಾಖೆಯ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
FID ಎಲ್ಲಿ ಮಾಡಿಸಬಹುದು
ಹೊಸದಾಗಿ FID ಮಾಡಲು ಹಾಗೂ ರೈತರ ತಾಕುಗಳನ್ನು IID ಗೆ ಜೋಡಣೆ ಮಾಡಲು ಕೃಷಿ, ಕಂದಾಯ, ತೋಟಗಾರಿಕೆ, ಆಪಾರ ಇಲಾಖೆ, ಕೆ.ಎಂ.ಎಫ್ ಹಾಗೂ ಇತರೆ ಇಲಾಖೆಗಳಿಗೆ ಸಂಪರ್ಕಿಸಬಹುದಾಗಿದೆ.
FID ಗೆ ಬೇಕಾಗುವ ದಾಖಲಾತಿಗಳು:
ಬ್ಯಾಂಕ ಪಾಸ್ ಪುಸ್ತಕ ಪ್ರತಿ ಆಧಾರ ಕಾರ್ಡ ಪ್ರತಿ, ಪಾಸ್‌ಪೋರ್ಟ ಫೋಟೋ, ರೈತರ ತಾಕುಗಳ ಎಲ್ಲ ಪಹಣಿ ಪ್ರತಿಗಳು ಆದ್ದರಿಂದ ಎಲ್ಲ ರೈತರು ತಮ್ಮ ರೈತರ ತಾಕುಗಳನ್ನು ||) ಗೆ ಜೋಡಣೆ ಮಾಡಲು ಅಥವಾ ಹೊಸದಾಗಿ FII) ಮಾಡಿಸಲು ಕೂಡಲೇ ಎಲ್ಲ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ವರದಿ : ಶರಣಯ್ಯ ವಿ.ಟಿ