LOCAL NEWS: “ಬೇವೂರ ಹೈಸ್ಕೂಲ್ ನಲ್ಲಿ ದಶಕದ ಬಳಿಕ ಭೇಟಿಯಾದ ಸಹಪಾಠಿಗಳು”

“ಬೇವೂರ ಹೈಸ್ಕೂಲ್ ನಲ್ಲಿ ದಶಕದ ಬಳಿಕ ಭೇಟಿಯಾದ ಸಹಪಾಠಿಗಳು”

 

ಯಲಬುರ್ಗಾ : ತಾಲ್ಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಬೇವೂರು ನಲ್ಲಿ ಹಮ್ಮಿಕೊಂಡಿದ್ದ 2014-2015ರ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಸವಿ ನೆನಪಿಗಾಗಿ ಹಾಗೂ ಮತ್ತು ಅವರನ್ನು ಒಗ್ಗೂಡಿಸಿ ಹಳೆ ನೆನಪುಗಳನ್ನು ಮೆಲುಕು ಹಾಕುವುದಕ್ಕಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನ ಗೆಳೆಯರೆಲ್ಲರೂ ಸೇರಿ ಆಯೋಜನೆ ಮಾಡಿ ಸಂಭ್ರಮಿಸಲಾಯಿತು.

ಈ ವೇಳೆ ಕರಿಯಪ್ಪ ಮಣ್ಣಿನವರ ಮಾತಾನಾಡಿ, ಅಂದಿನ ಶಿಕ್ಷಕರ ಪಾಠಗಳು, ಸ್ನೇಹ ಸಂಬಂಧ ಮತ್ತು ಹಳೆ ನೆನಪುಗಳನ್ನು ಮಾಡಿಕೊಂಡು ಸಂತೋಷ ಪಟ್ಟರು. ಹಲವು ವರ್ಷಗಳ ನಂತರ ಸೇರಿದ್ದ ವಿದ್ಯಾರ್ಥಿಗಳು ಶೈಕ್ಷಣಿಕ ದಿನದ ಸಂಭ್ರಮ, ಅಭ್ಯಾಸ, ಅಂದಿನ ಸಿಹಿ ಕಹಿ ಕ್ಷಣಗಳನ್ನು ನೆನಪಿಸಿಕೊಂಡರು. ಹಳೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮಗೆ ಕಲಿಸಿದ್ದ ಶಿಕ್ಷಕರನ್ನು ನೆನೆದರು. ನಾವು ಎಸ್.ಎಸ್‌.ಎಲ್.ಸಿ ಮುಗಿಸಿ ಹತ್ತು ವರ್ಷಗಳು ಕಳೆದವು ಎಂದು ನೆನಪಿಸಿದ ಸುಂದರ ಘಳಿಗೆ ಇವತ್ತು ಒದಗಿ ಬಂದಿತ್ತು ಎಂದರು.

ಈ ಆಯೋಜನೆ ಮಾಡಿದ ದಶಕದ ಬಳಿಕ ಮತ್ತೆ ಆಯೋಜಕರ ಕರೆಗೆ ಓಗೊಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಎಲ್ಲಾ 2015ರ ಹತ್ತನೇ ತರಗತಿ ಸ್ನೇಹಿತ/ಸ್ನೇಹಿತೆಯರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಆಯೋಜಕರು ತಿಳಿದರು.

ಈ ಸಂದರ್ಭದಲ್ಲಿ ಶರಣ್ ಹಳ್ಳಿ, ವಿನಯ್ ಬಡಿಗೇರ, ಹನಮೇಶ್ ಟಿಕಲ್, ಸೋಮಶೇಖರ್ ವಣಗೇರಿ, ರವಿ ಮುರಡಿ, ಪ್ರಶಾಂತ್ ಮುರಡಿ, ನೇತ್ರಾವತಿ ವಣಗೇರಿ, ವೀರೇಶ್ ಹೊಸಗೇರಿ, ಅನಿತಾ ಬೇವೂರು, ಲಕ್ಷ್ಮಿ ಬೇವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು‌.

Leave a Reply

error: Content is protected !!