LOCAL NEWS : “ನವಜೀವನ ವೃದ್ದಾಶ್ರಮಕ್ಕೆ ನೆರವು”

“ನವಜೀವನ ವೃದ್ದಾಶ್ರಮಕ್ಕೆ ನೆರವು”

ಗಂಗಾವತಿ: ನಗರದ ಲಯನ್ಸ್ ಕ್ಲಬ್ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ ನವಜೀವನ ವೃದ್ದಾಶ್ರಮಕ್ಕೆ 40 ಬೆಡ್ ಶೀಟುಗಳು, 80 ಸೀರೆ ಹಾಗೂ ಬ್ರೇಡ್ ಬನ್‌ಗಳನ್ನು ಶುಕ್ರವಾರ ದಂದು ವೃದ್ದಾಶ್ರಮದಲ್ಲಿ ವಿತರಿಸಲಾಯಿತು.

ಈ ವೇಳೆ ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಡಾ.ಚಂದ್ರಪ್ಪ, ಡಾ.ಸೋಮರಾಜು, ಡಾ.ಮಾದವಶೆಟ್ಟಿ, ವಿರೂಪಾಕ್ಷಪ್ಪ ಸಿಂಗನಾಳ, ಟಿ.ರಾಮಕೃಷ್ಣ, ಗುರುಪ್ರಸಾದ್ ಹಾಗೂ ಲಯನ್ಸ್ ಕ್ಲಬ್‌ ಅಧ್ಯಕ್ಷ ಡಾ.ಶಿವಕುಮಾ‌ರ್ ಮಾಲಿಪಾಟೀಲ್, ನವಚೇತನ ವೃದ್ಧಾಶ್ರಮದ ವ್ಯವಸ್ಥಾಪಕ ಆನಂದರಾವ್‌ ಉಪಸ್ಥಿತರಿದ್ದರು.
ಈ ವೇಳೆ ಲಯಸ್ ಕ್ಲಬ್ ಮತ್ತು ವಸಧಾ ಫೌಂಡೇಶನ್ ಅವರಿಗೆ ನವಜೀವನ ವೃದ್ಧಾಶ್ರಮಕ್ಕೆ ನೆರವು ನೀಡಿದ್ದಕ್ಕಾಗಿ ವೃದ್ಧಾಶ್ರಮ ವತಿಯಿಂದ ಧನ್ಯವಾದಗಳು ತಿಳಿಸಲಾಗಿದೆ.

Leave a Reply

error: Content is protected !!