GANGAVATI NEWS : ಅಂಗವಿಕಲರಿಗೆ ಜಾಬ್ ಕಾರ್ಡ್ ನೀಡುವಂತೆ ಕರವೇ ಅಂಗವಿಕಲರ ತಾಲೂಕ ಅಧ್ಯಕ್ಷ ಗುಡಿಕೋಟಿ ಒತ್ತಾಯ!

You are currently viewing GANGAVATI NEWS : ಅಂಗವಿಕಲರಿಗೆ ಜಾಬ್ ಕಾರ್ಡ್ ನೀಡುವಂತೆ ಕರವೇ ಅಂಗವಿಕಲರ ತಾಲೂಕ ಅಧ್ಯಕ್ಷ ಗುಡಿಕೋಟಿ ಒತ್ತಾಯ!
  • ಗಂಗಾವತಿ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಸಭೆ ವ್ಯಾಪ್ತಿಯ ಅಂಗವಿಕಲರಿಗೆ ಜಾಬ್ ಕಾರ್ಡ್ ನೀಡುವಂತೆ ಕರವೇ ಅಂಗವಿಕಲರ ತಾಲೂಕ ಅಧ್ಯಕ್ಷ ಗುಡಿಕೋಟಿ ಒತ್ತಾಯ ಮಾಡಿದರು.

ಗಂಗಾವತಿ 18 ಕೇಂದ್ರ ಸರ್ಕಾರದ ಮಹತ್ವ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ಈಗಾಗಲೇ ಗ್ರಾಮೀಣ ಪ್ರದೇಶದ ಹಲವು ಬಡ ಕುಟುಂಬಗಳಿಗೆ ಜಾಬ್ ಕಾರ್ಡ್ ನೀಡುವುದರ ಜೊತೆಗೆ ಗ್ರಾಮೀಣ ಭಾಗದ ಬದುಕಿಗೆ ಬೆಳಕಾಗಿದೆ, ಅದೇ ಮಾದರಿಯಲ್ಲಿ ಖಾತ್ರಿ ಯೋಜನೆಯನ್ನು ನಗರಸಭೆ ಪುರಸಭೆ ವ್ಯಾಪ್ತಿಯ ವಿಕಲಚೇತನ ಬಡ ಕುಟುಂಬಗಳಿಗೆ ಯೋಜನೆ ಉಷ್ಣಪಿಸುವುದರ ಮೂಲಕ ಜಾಬ್ ಕಾರ್ಡ್ ನೀಡುವುದರ ಮೂಲಕ ಅಸಹಾಯಕ ವಿಕಲಾಂಗರ ಬದುಕಿಗೆ ಆಸರೆಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗ ಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಳಗ ಅಂಗವಿಕಲರ ಘಟಕದ ಅಧ್ಯಕ್ಷ ಅಶೋಕ ಗುಡಿ ಕೋಟಿ ಉಭಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ 3406 ಅಂಗವಿಕಲರನ್ನು ಹೊಂದಿದ್ದು ಶೇಖಡ 90ರಷ್ಟು ಜನ ವಿಕಲಚೇತನರು ಯಾವುದೇ ಉದ್ಯೋಗವಿಲ್ಲದೆ ದೊಡ್ಡ ಪ್ರಮಾಣದ ಕೆಲಸ ಕಾರ್ಯಗಳನ್ನು ನಡೆಸಲು ಸಾಧ್ಯವಾಗದೆ ಭಿಕ್ಷೆ ಬೇಡಿ ಜೀವನ ನಡೆಸುವ ಪರಿಸ್ಥಿತಿ, ನಿರ್ಮಾಣವಾಗಿದೆ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಂತಹ ರಾಜ್ಯ ಹಾಗೂ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳು ವಿಕಲಚೇತನರಿಗಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

Leave a Reply

error: Content is protected !!