ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿ ನಿಂದನೆ ಕಾಯ್ದೆ ಜಾರಿಗೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ

You are currently viewing ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿ ನಿಂದನೆ ಕಾಯ್ದೆ ಜಾರಿಗೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ

ಗಂಗಾವತಿ : ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿ ನಿಂದನೆ ಕಾಯ್ದೆ ಜಾರಿ ಮತ್ತು ವಿವಿಧ ಎಂಟು ಬೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಗಂಗಾವತಿ ತಾಲೂಕ ಸವಿತಾ ಸಮಾಜದಿಂದ ಮಂಗಳವಾರ ತಹಶೀಲ್ದಾರ್ ಮೂಲಕ  ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

                     ಪಟ್ಟಣದ ತಹಶೀಲ್ದಾರ್ ಕಾರ್ಯಲಯದಲ್ಲಿ ಮನವಿ ಸಲ್ಲಿಸಿ ಬಳಿಕ ಸವಿತಾ ಸಮಾಜದ ತಾಲೂಕ ಅಧ್ಯಕ್ಷ ಎಚ್. ಗೋಪಾಲ ಮಾತನಾಡಿ ದಿನದಿಂದಲೂ ನಮ್ಮ ಸವಿತಾ ಸಮುದಾಯವು ವೈದ್ಯ ವೃತ್ತಿ, ಕ್ಷೌರಿಕ ವ್ಯಕ್ತಿ ಮತ್ತು ಡೋಲು, ನಾದಸ್ವರ ನುಡಿಸುವ ಈ ಮೂರು ವೃತ್ತಿಯನ್ನು ಸೇವಾಮನೋಭಾವದಿಂದ ಮಾಡಿಕೊಂಡು ಬರುತ್ತಿದ್ದು, ಸ್ವಾತಂತ್ರ‍್ಯ ಬಂದು ಅನೇಕ ವರ್ಷಗಳವರೆಗೆ ಹಳ್ಳಿಗಳಲ್ಲಿ ಸವಿತಾ ಸಮಾಜದವರು ಕ್ಷೌರಿಕ ವೃತ್ತಿಯನ್ನು ನಿರ್ವಹಿಸಿ, ಹಣದ ಬದಲಾಗಿ ದವಸ ಧಾನ್ಯಗಳು, ಆಹಾರ ಪದಾರ್ಥಗಳನ್ನು ಪಡೆದು ಜೀವನ ನಿರ್ವಹಿಸುತ್ತಿದ್ದರು. ಭಾರತ ದೇಶದ ಸ್ವಾತಂತ್ರ‍್ಯ ಪೂರ್ವದಿಂದಲೂ ಹಾಗೂ ಸ್ವಾತಂತ್ರ‍್ಯದ ನಂತರವೂ ತೀವ್ರ ಶೋಷಣೆ, ಅಸ್ಪಶ್ಯತೆ, ಅಸಮಾನತೆಯಿಂದ ನಮ್ಮ ಸವಿತಾ ಸಮಾಜದ ಪಾರಂಪರಿಕ ವೃತ್ತಿಯಾದ ವೈದ್ಯ ಪದ್ಧತಿಯನ್ನು ಕಸಿದುಕೊಂಡರು. ಆದರೂ ದೇಶದ ಹಲವಾರು ಭಾಗಗಳಲ್ಲಿ ಇಂದಿಗೂ ಸವಿತಾ ಸಮಾಜದವರು ಪಾರಂಪರಿಕ ವೈದ್ಯ ಪದ್ಧತಿಯನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು.

                       ನಮ್ಮ ದೇಶದಲ್ಲಿ ಸಂವಿಧಾನದ ನಿಯಮ ಪ್ರಜಾಪ್ರಭುತ್ವದ ಆಶಯಗಳಂತೆ ಪಾರಂಪರಿಕ ವೃತ್ತಿಗಳ ಮೇಲೆ ಯಾವುದೆ ನಿಯಮಗಳನ್ನು ತರದೆ ಇರುವರರಿಂದ ಜಾತಿ ಆಧಾರಿತ ಸುಮಾರು ೧೨ ವೃತ್ತಿಗಳು ಆಯಾಯ ಸಮುದಾಯದಿಂದ ದೂರವಾಗಿವೆ, ಆದರೆ ನಮ್ಮ ಸವಿತಾ ಸಮಾಜದ ಕ್ಷೌರಿಕ ವೃತ್ತಿ ಹಾಗೂ ಮಂಗಳವಾದ್ಯ ಪಾರಂಪರಿಕ ವೈದ್ಯ ಪದ್ಧತಿಯು ಧಾರ್ಮಿಕ ವೃತ್ತಿಯಾಗಿದ್ದು ೨೦೧೫ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ಪುರೋಹಿತ ಸಂಘದ ವಿಚಾರದಲ್ಲಿ ನ್ಯಾಯಾಲಯದ ಆದೇಶ ಮಾಡಿರುವ ಆನ್ವಯ. ಧಾರ್ಮಿಕ ವ್ಯಕ್ತಿಗಳು ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಪದ್ಧತಿಯನ್ನು ಮುಂದುವರಿಸುವುದು. ಆದ ಕಾರಣ ನಮ್ಮ ರಾಜ್ಯದಲ್ಲಿಯೂ ಸಹ ಕ್ಷೌರಿಕ ವ್ಯಕ್ತಿಯು ಒಂಡವಾಳಶಾಹಿ ವಿದೇಶಿ ಕಂಪನಿ ಅನ್ಯರಾಜ್ಯದವರಿಗೆ ಯಾವುದೇ ನಿಯಮ ಜಾರಿ ಮಾಡದೆ ಪರವಾನಗಿ ನೀಡುತ್ತಿರುವುದರಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವವರ ಬದುಕು ಅತ್ಯಂತ ಶೋಚನೀಯ ಹಂತಕ್ಕೆ ತಲುಪಿದೆ.

ಸವಿತಾ ಸಮಾಜದ ನಿಂದನೆ ಪದವನ್ನು ಸಾರ್ವಜನಿಕರು ಬೈಗುಳ ಪದವಾಗಿ ಉಪಯೋಗಿಸುತ್ತಿದ್ದ ಕಾರಣ ಸವಿತಾ ಸಮಾಜವು ಅದನ್ನು ಖಂಡಿಸಿ ಪ್ರತಿಭಟಿಸಿದ್ದ ಪರಿಣಾಮ ಸರ್ಕಾರದಿಂದ ಸವಿತಾ ಸಮಾಜದ ಜಾತಿನಿಂದನೆ ಪದವನ್ನು ತೆಗೆದಿರುತ್ತದೆ. ಆದರೆ ಜಾತಿ ನಿಂದನೆ ಪದವನ್ನು ಬೈಗುಳವಾಗಿ ಬಳಕೆ ಮಾಡುವ ವ್ಯಕ್ತಿಗಳಿಗೆ ಶಿಕ್ಷಿಸುವ ಕಾನೂನು ಇಲ್ಲದೆ ಇರುವದರಿಂದ ಇಂದಿಗೂ ಅನೇಕ ರಾಜಕೀಯ ನಾಯಕರುಗಳು, ಸಿನಿಮಾ ನಟರು, ಜ್ಯೋತಿಷಿಗಳು ಜಾತಿನಿಂದನೆ ಪದವನ್ನು ಬಳಕೆ ಮಾಡುತ್ತಿರುವುದು ಸವಿತಾ ಸಮುದಾಯದವರನ್ನು ಮಾನಸಿಕವಾಗಿ ಕುಗ್ಗಿಸುವಂತಾಗಿದೆ. ಹಾಗಾಗಿ ಜಾತಿನಿಂದನ ಕಾಯ್ದೆ ಜಾರಿಗೆ ತರಬೇಕಾದ ಕರ್ತರ ಸರ್ಕಾರದ್ದಾಗಿರುತ್ತದೆ. ಗ್ರಾಮಗಳಲ್ಲಿ ಸವರ್ಣಿಯರು ಮತ್ತು ಆವರ್ಣಿಯರ ಮಧ್ಯ ಕ್ಷೌರಿಕ ವೃತ್ತಿ. ಮಾಡುವುದು ಕಷ್ಟಕರವಾಗಿದೆ. ರಾಜ್ಯದ ಹಲವಾರು ಗ್ರಾಮಗಳಲ್ಲ: ಸವಿತಾ ಸಮುದಾಯದ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದಿರುವ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದರೂ ಯಾವುದೇ ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಟ್ಟಿಲ್ಲ. ಈಗಾಗಲೇ ಹಲವಾರು ವೃತ್ತಿಗಳ ಉಳವಿಗಾಗಿ ಎಸ್.ಸಿ. ಮತ್ತು ಎಸ್. ಜಾತಿ ನಿಂದನೆಗಾಗಿ ವಕೀಲರ ದೌರ್ಜನ್ಯ, ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ, ಸರ್ಕಾರಿ ನೌಕರರಿಗೆ ಐ.ಪಿ.ಸಿ ಕಾಲಂ ಅಡಿಯಲ್ಲಿ ದೌರ್ಜನ್ಯ ಕಾಯ್ದೆ ನೀಡಿದ್ದಾರೆ. ಅದರ ಅನುಸಾರದಲ್ಲ ಸವಿತಾ ಸಮುದಾಯದರಿಗೂ ಜಾತಿ ನಿಂದನೆ ಮತ್ತು ದೌರ್ಜನ್ಯ ಕಾಯ್ದೆ ಜಾರಿಗೆ ತಂದರೆ ಮಾತ್ರ ನಾವು ನಾಗರಿಕ ಸಮಾಜದಲ್ಲಿ ಗೌರವಯುತವಾಗಿ ಬದುಕುವ ವ್ಯವಸ್ಥೆ ನಿರ್ಮಣವಾಗುತ್ತದೆ.

                   ನಮ್ಮ ಸಮಾಜದ ಬೇಡಿಕೆಗಳನ್ನು ದಿನಾಂಕ ೧೫-೧೧-೨೦೧೩ ರೊಳಗಾಗಿ ಸರ್ಕಾರ ಆದೇಶ ಮಾಡದಿದ್ದರೆ, ನಮ್ಮ ಸವಿತಾ ಸಮಾಜದ ಸ್ಥಾಮಿಗಳಾದ ಸವಿತಾನಂದನಾಥ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪಾರಂಭಗೊAಡು ಬೆಂಗಳೂರಿನ ಸ್ವಾತಂತ್ರ ಉದ್ಯಾನದವರೆಗೂ ಪಾದಯಾತ್ರೆ ಮಾಡಿ ನಂತರ ಸ್ವಾತಂತ್ರ‍್ಯ ಉದ್ಯಾನವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಸವಿತಾ ಸಮುದಾಯದವರು ಜೊತೆಯಲ್ಲಿ ಇರುತ್ತಾರೆ. ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲದಿದ್ದರೂ ನಮ್ಮ ಪ್ರಜಾಪ್ರಭುತ್ವ ಹಕ್ಕಿಗಾಗಿ ನಾವು ಹೋರಾಡಬೇಕಾಗುತ್ತದೆ ಎಂದರು.

                  ಈ ಸಂದರ್ಭದಲ್ಲಿ ಸವಿತಾ ಸಮಾಜದ ಗೌರವ ಅಧ್ಯಕ್ಷರಾದ ಎನ್.ವೈ ಮಹಾಬಳೇಶ್ವರ, ತಾಲೂಕ ಉಪಾಧ್ಯಕ್ಷರಾದ ಲಕ್ಷ್ಮಣ, ಜಂಟಿಯಾದ ಭೀಮೇಶ, ಕಾರ್ಯದರ್ಶಿ ಈ ತಾಯಪ್ಪ, ಸಮಾ ಪದಾಧಿಕಾರಿಗಳಾದ ಈ, ಶ್ರೀನಿವಾಸ, ಕುಮಾರ, ಶ್ರೀನಿವಾಸ, ಎನ್, ಮಂಜುನಾಥ, ಪ್ರಸಾದ, ಎನ್.ವಿಠಲ, ಪ್ರಭಾಕರ, ಓಬಳೇಶ, ಕಾಳಂಗ, ಬಸವರಾಜ, ನಾಗರಾಜ, ದೇವರಾಜ, ಎನ್. ವಿ ಇತರರಿದ್ದರು.

 

 

 

Leave a Reply

error: Content is protected !!