LOCAL NEWS : ಕುಕನೂರಿನಲ್ಲಿ ಭಾರೀ ಮಳೆ : ಜಲಾವೃತಗೊಂಡ ಸರ್ಕಾರಿ ಶಾಲೆಗಳು..! : ವಿದ್ಯಾರ್ಥಿಗಳ ಪರದಾಟ..!!
ಕುಕನೂರು : ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಈ ಒಂದು ಮಳೆಯ ಆರ್ಭಟಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಗಳು ಜಲಾವೃತಗೊಂಡಿದೆ. ಕುಕನೂರು ಪಟ್ಟಣದ ಸರ್ಕಾರಿ ಉರ್ದು ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಶಾಲೆಯ ಆವರಣದಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಈ ಪರಿಸ್ಥಿಯಲ್ಲಿಯೂ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ಕುಳಿತುಕೊಂಡಿರುವುದು ಕಂಡು ಬಂತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶಾಲೆಯ ಕಾಂಪೌಂಡ್ ಸಹ ಕುಸಿದು ಬೀಳುವು ಸಂಭವಿದ್ದು. ಸದ್ಯ ಶಾಲೆಗೆ ನೀರು ನುಗ್ಗದಂತೆ ಶಾಶ್ವತ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು, ಪೋಷಕರು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಶಾಲೆಯ ಮುಖ್ಯೋಪಾಧ್ಯಯರು ಪಟ್ಟಣ ಪಂಚಾಯತ್‌ಗೆ ಮನವಿ ಮಾಡಿಕೊಂಡಿದ್ದಾರೆ. ಮಳಗಾಲದ ಸಂದರ್ಭದಲ್ಲಿ ಹೆಚ್ಚು ಮಳೆಯಾದಾಗ ಶಾಲೆಯ ಆವರಣದಲ್ಲಿ ಅಧಿಕಮಟ್ಟದಲ್ಲಿ ನೀರು ತುಂಬಿಕೊಂಡು ವಿದ್ಯಾಥಿಗಳಿಗೆ ತರಗತಿಗಳಿಗೆ ಸಂಚರಿಸಲು ಹಾಗು ಆಟೋಟಗಳಲ್ಲಿ ಭಾಗವಹಿಸಲು, ಒಟ್ಟಾರೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಿದ್ದು, ಮತ್ತು ಸಂಗ್ರಹವಾದ ನೀರಿನಿಂದ ಸೊಳ್ಳೆಗಳು ಹೆಚ್ಚಾಗುತ್ತದೆ. ಮಕ್ಕಳಿಗೆ ಮಾರಣಾಂತಿಕ ರೋಗ ಡೇಂಗ್ಯೂ, ಚಿಕನ್ ಗುನ್ಯ, ಇತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಮೂಡಿದ್ದು, ಮಕ್ಕಳು ಮತ್ತು ಪಾಲಕರಲ್ಲಿ ಆತಂಕ ಆವರಿಸಿದೆ.
ಮಳೆಯಿಂದಾಗಿ ಶಾಲಾ ಮೈದಾನದ ತುಂಬಾ ನೀರು ತುಂಬಿ ಓಡಾಡಲು ತುಂಬಾ ಅನಾನುಕೂಲವಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ಮೈದಾನವನ್ನು ನೀರು ನಿಲ್ಲದ ಹಾಗೆ ಸಮತಟ್ಟು ಮಾಡಿಕೊಡಬೇಕೆಂದು ಎಂದು ವಿದ್ಯಾರ್ಥಿಗಳು, ಪೋಷಕರ ಒತ್ತಾಯವಾಗಿದೆ.