ಆ.24 ರಂದು ಕುಕನೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಪದಗ್ರಹಣ ಹಾಗೂ ಕವಿ ಗೋಷ್ಠಿ!
ಕುಕನೂರ : ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತು ಉದ್ಘಾಟನೆ ಪದಾಧಿಕಾರಿಗಳಿಗೆ ಪದಗ್ರಹಣ ಕವಿಗೋಷ್ಠಿ ಮತ್ತು ಗಾನಸುಧೆ ಕಾಯ೯ಕ್ರಮ ಆ. 24 ರಂದು ರವಿವಾರದಂದು ಬೆಳಗ್ಗೆ 10 ಗಂಟೆಗೆ ಕುಕನೂರ ಪಟ್ಟಣದ ಯಲಬುರ್ಗಾ ರಸ್ತೆಯಲ್ಲಿರುವ ಇಟಗಿ ಭೀಮಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಕನೂರು ಚುಟುಕು ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಬಸವರಾಜ ಉಪ್ಪಿನ್ ಅವರು ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಗಮಕ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಫಕೀರಪ್ಪ ವಜ್ರಬಂಡಿ, ನಿವೃತ್ತ ಉಪನ್ಯಾಸಕ, ಸಾಹಿತಿ ರಾಮಣ್ಣ ಪಿ. ರಾಜೂರ, ತಾಲೂಕಾ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಮಹೇಶ ಸಬರದ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘ ಅಧ್ಯಕ್ಷ ಮಹಾಂತೇಶ ಅಂಗಡಿ, ಕೊಪ್ಪಳ ದೈಹಿಕ ಶಿಕ್ಷಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಕಂಬಳಿ, ಕುಕನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ತಳವಾರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ ನೆಲಗಾಣಿ, ಪರಿಷತ್ ಉಪಾಧ್ಯಕ್ಷೆ ಅಕ್ಕಮಹಾದೇವಿ ಅಂಗಡಿ, ಯಲಬುರ್ಗಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ರಾಜೂರ, ಕುಕನೂರ ಪ್ರ. ಪ್ರಾ. ಶಿ. ಸಂಘದ ಅಧ್ಯಕ್ಷ ಪ್ರಭು ಶಿವನಗೌಡ, ಕುಕನೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಳಕಪ್ಪ ಕುಂಬಾರ, ಚುಟುಕು ಸಾಹಿತ್ಯ ಪರಿಷತ್ ಯಲ್ಬುರ್ಗಾ ಘಟಕದ ಅಧ್ಯಕ್ಷ ಶಿವಮೂರ್ತಿ ಇಟಗಿ, ಕುಷ್ಟಗಿ ಚುಟುಕು ಸಾಹಿತ್ಯಪರಿಷತ್ ಅಧ್ಯಕ್ಷ ಮಹೇಶ ಹಡಪದ ಸೇರಿದಂತೆ ಅನೇಕರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುಕನೂರ ಚುಟುಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಸವರಾಜ ಉಪ್ಪಿನ್ ಅವರು ಅಧ್ಯಕ್ಷತೆ ವಹಿಸುವರು ಎಂದರು.
ಮುರಾರಿ ಭಜಂತ್ರಿ ಬಳಗದಿಂದ ಗಾನಸುಧೆ, ವಿವಿಧ ಪ್ರತಿಭಾನ್ವಿತ ಕವಿಗಳಿಂದ ಚುಟುಕು ಕವಿಗೊಷ್ಠಿ ನಡೆಯಲಿದ್ದು , ಈ ಕಾರ್ಯಕ್ರಮಕ್ಕೆ ಸವ೯ರು ಆಗಮಿಸಿ, ಕನ್ನಡ ನಾಡು -ನುಡಿ ರಕ್ಷಣೆ ಪ್ರಗತಿಗೆ ನಾಂದಿ ಹಾಡಿ, ಕಾಯ೯ಕ್ರಮವನ್ನು ಯಶಸ್ಸುಗೊಳಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಅವರು ಕೋರಿದ್ದಾರೆ.