LOCAL NEWS : ಇಂದು ಅನ್ನದಾನೀಶ್ವರ ಮಠದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ!
ಕುಕನೂರ : ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವ ಸಮಿತಿ, ಶ್ರೀ ಅನ್ನದಾನೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಜಯಪ್ರೀಯ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ವಿನಾಯಕ ಆಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ, ಕುಕನೂರ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ಕೊಪ್ಪಳ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಆ.22 ಶುಕ್ರವಾರ ಪಟ್ಟಣದ ಶ್ರೀಅನ್ನದಾನೀಶ್ವರ ಶಾಖಾಮಠದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀಅನ್ನದಾನೀಶ್ವರ ಶಾಖಾಮಠದ ಪೀಠಾಧಿಪತಿ ಡಾ.ಮಹಾದೇವ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಮುಂಜಾನೆ : 10-00 ರಿಂದ ಮಧ್ಯಾಹ್ನ : 03-00 ಗಂಟೆವರೆಗೆ ಕಣ್ಣಿನ ತಪಾಸಣೆ ಮಾಡಲಾಗುವುದು. ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಸುಪ್ರಸಿದ್ದ ನೇತ್ರತಜ್ಞ ಡಾ. ವೆಂಕಟರಾಮ್ ಕಟ್ಟಿಯವರ ಜಯಪ್ರಿಯ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಚಿತವಾಗಿ ಅತ್ಯಾಧುನಿಕ ಪದ್ಧತಿಯಿಂದ ಹೊಲಿಗೆ ರಹಿತ (IOL ಇಂಪ್ಲಾಟೇಶನ ಆಪರೇಷನ್) ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ವಿಶೇಷ ಸೂಚನೆಗಳು : ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನಿಭವಿಗಳು ಪಾಸಪೋರ್ಟ ಸೈಜಿನ ಭಾವಚಿತ್ರ ಹಾಗೂ ಆಧಾರಕಾರ್ಡ, ರೇಷನಕಾರ್ಡ ಝರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕು.
ಯಶಸ್ವಿನಿ ಕಾರ್ಡ ಹಾಗೂ ಶ್ರೀ ಧರ್ಮಸ್ಥಳ ಸಂಘದ ಆರೋಗ್ಯ ಕಾರ್ಡ ಹೊಂದಿದ ಫಲಾನುಭವಿಗಳಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬೇಕಾದ ವಿಳಾಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ಶ್ರೀ ಅನ್ನದಾನೀಶ್ವರ ಶಾಖಾಮಠ ಕುಕನೂರು. ವಿನಾಯಕ ಅಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ ಸುಣಗಾರ ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಹತ್ತಿರ ಕುಕನೂರು, ಸಮುದಾಯ ಆರೋಗ್ಯ ಕೇಂದ್ರ ಕುಕನೂರು ಮತ್ತು ಪಿ.ಸಿ.ಹೆಚ್.ಓ. & ಸಿ.ಹೆಚ್.ಓ ಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಲು ಕೋರಲಾಗಿದೆ.
ಕುಕನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಗುರು-ಹಿರಿಯರು ಮತ್ತು ಸಂಘ ಸಂಸ್ಥೆಗಳು, ಮಹಿಳಾ ಸಂಘದವರು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ (ಮೊ. 9845034917) ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.