You are currently viewing BIG NEWS : ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ : ಸದನದಲ್ಲಿ ಪಕ್ಷಾತೀತ ಒಮ್ಮತ!!

BIG NEWS : ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ : ಸದನದಲ್ಲಿ ಪಕ್ಷಾತೀತ ಒಮ್ಮತ!!

BIG NEWS : ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ : ಸದನದಲ್ಲಿ ಪಕ್ಷಾತೀತ ಒಮ್ಮತ!

 ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಬೆಳಗಾವಿ : ಮದುವೆಯಾಗದ ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನಪರಿಷತ್ ನಲ್ಲಿ ಕೇಳಿ ಬಂದಿದ್ದು, ಬಹಳ ಸೂಕ್ಷ್ಮ ಹಾಗೂ ಸ್ವಾರಸ್ಯಕರ ಘಟನೆ ನಡೆಯಿತು.

ಯುವ ರೈತರಿಗೆ, ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇಂತಹ ಯುವಕರನ್ನು ಮದುವೆಯಾಗುವ ಹೆಣ್ಣುಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡಬೇಕೆಂಬ ಪ್ರಸ್ತಾಪ ವಿಧಾನ ಪರಿಷತ್ ನಲ್ಲಿ ಕೇಳಿ ಬಂದಿತು. ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ಟೇಬಲ್ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ಪುಟ್ಟಣ್ಣ, ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ರೈತರ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ವ್ಯವಸಾಯ ಮಾಡುವ ಗಂಡುಮಕ್ಕಳು ನಮಗಾಗಿ ಮಠ ಕಟ್ಟಿಕೊಡಿ ಎಂದು ತುಂಬಾ ಬೇಸರದಿಂದ ಈ ಮಾತುಗಳನ್ನು ಹೇಳುತ್ತಿದ್ದರು. ಹಾಗಾಗಿ ಸರ್ಕಾರ ಮದುವೆ ಆಗದ ಕೃಷಿಕ ಯುವಕರಿಗೆ ಯೋಜನೆ ರೂಪಿಸಬೇಕು ಎಂದು ಹೇಳಿದರು.

ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕನಿಷ್ಠ 10 ಲಕ್ಷ ರೂ.ಗಳನ್ನು ಹೆಣ್ಣು ಮಕ್ಕಳ ಹೆಸರಿನಲ್ಲೇ ಬ್ಯಾಂಕ್ ಠೇವಣಿ ಇಟ್ಟು, ಭದ್ರತೆ ಒದಗಿಸಿ ಭರವಸೆ ಮೂಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.

Prajavikshane

Chandru R Bhanapaur

Leave a Reply

error: Content is protected !!