LOCAL NEWS : ಹಿರೇಕಾಸನಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹಿಸಿ ಪ್ರತಿಭಟನೆ..!

You are currently viewing LOCAL NEWS : ಹಿರೇಕಾಸನಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹಿಸಿ ಪ್ರತಿಭಟನೆ..!

LOCAL NEWS : ಹಿರೇಕಾಸನಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹಿಸಿ ಪ್ರತಿಭಟನೆ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕೊಪ್ಪಳ ಫೆ. 20 : ತಾಲೂಕಿನ ಹಿರೇ ಕಾಸನಕಂಡಿ ಗ್ರಾಮದಲ್ಲಿನ ಸರ್ಕಾರಿ ಶಾಲೆ ರಕ್ಷಣೆ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ದುರ್ಗಮ್ಮನ ಗುಡಿ ಸಮೀಪ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ )ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ತುಳಜರಾಮ್ ಎನ್.ಕೆ., “ಗ್ರಾಮದಲ್ಲಿ ಬಡವರಿಗೆ ಇರುವ ಒಂದೇ ಸರ್ಕಾರಿ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಐದು ವರ್ಷದ ಮಕ್ಕಳು 12 ಕಿಮೀ ದೂರ ಹೇಗೆ ಹೋಗಬೇಕು? 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ನಮ್ಮೂರಿನ ಶಾಲೆ ಮುಚ್ಚಬಾರದು ಎಂಬುದು ಪೋಷಕರ ಆಗ್ರಹ,” ಎಂದು ಹೇಳಿದರು.

ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಭಗತ್ ಸಿಂಗ್ ಹಾಗೂ ನೇತಾಜಿ ಅವರ ಶಿಕ್ಷಣದ ಕುರಿತ ಆದರ್ಶಗಳನ್ನು ಉಲ್ಲೇಖಿಸಿದ ಅವರು, “ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರಿ ಶಾಲೆಗಳ ಬಲಪಡಿಸುವತ್ತ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಜನರ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ರಕ್ಷಣೆಗಾಗಿ ಪ್ರಬಲ ಹೋರಾಟ ಕಟ್ಟಬೇಕೆಂದು ಕರೆ ನೀಡಲಾಯಿತು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯ ಸಿಂಧು ಕೌದಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಕುಟಗನಳ್ಳಿ,ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಕಾರ್ಯದರ್ಶಿ ವೀರಯ್ಯ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

error: Content is protected !!