You are currently viewing LOCAL NEWS : ಕೊಪ್ಪಳ | ಯುವಜನರಲ್ಲಿ ನಾಯಕತ್ವ ಬೆಳೆಸಲು ಜು. 10ರಿಂದ ಕಾರ್ಯಾಗಾರ!

LOCAL NEWS : ಕೊಪ್ಪಳ | ಯುವಜನರಲ್ಲಿ ನಾಯಕತ್ವ ಬೆಳೆಸಲು ಜು. 10ರಿಂದ ಕಾರ್ಯಾಗಾರ!

LOCAL NEWS : ಕೊಪ್ಪಳ | ಯುವಜನರಲ್ಲಿ ನಾಯಕತ್ವ ಬೆಳೆಸಲು ಜು. 10ರಿಂದ ಕಾರ್ಯಾಗಾರ!

 

PV NEWS ಕನ್ನಡ 24×7: 

ಕೊಪ್ಪಳ, ಜುಲೈ 08: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್,ಬೆಂಗಳೂರು ಹಾಗೂ ಆಲ್ಫಾ ಫೌಂಡೇಶನ್ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರು, ಗ್ರಾಮೀಣ ಪ್ರದೇಶದ ಯುವಕರು ಹಾಗೂ ಹಿಂದುಳಿದ ಸಮುದಾಯದ ಯುವಜನರಿಗಾಗಿ ಮೂರು ದಿನಗಳ ವಸತಿ ಸಹಿತ ‘ಸ್ವಯಂ ಮತ್ತು ಸಮಾಜ’ ವಿಷಯದ ಯುವಜನ ಸಾಮರ್ಥ್ಯ ವೃದ್ಧಿ ಕಾರ್ಯಾಗಾರವನ್ನು ಜುಲೈ 10ರಿಂದ 12ರವರೆಗೆ ಕುಷ್ಟಗಿ ರಸ್ತೆಯ ಸಮೂಹ ಸಮರ್ಥ ಕಟ್ಟಡ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಆಲ್ಫಾ ಫೌಂಡೇಶನ್ ಮುಖ್ಯಸ್ಥೆ ಸಲ್ಮಾ ಜಾನ್, ವ್ಯಕ್ತಿತ್ವ ವಿಕಸನ, ಸಮಾಜದ ಅರಿವು, ನಾಯಕತ್ವ ಕೌಶಲ್ಯ, ಸಂವಿಧಾನಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಹಾಗೂ ಯುವಜನರ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತಜ್ಞರಿಂದ ತರಬೇತಿ, ಸಂವಾದ ಹಾಗೂ ಗುಂಪು ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಕಾರ್ಯಾಗಾರವು ಮೂರು ದಿನಗಳ ವಸತಿ ಸಹಿತ ನಡೆಯಲಿದ್ದು, ಭಾಗವಹಿಸುವವರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.

ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕರು ಹಾಗೂ ಹಿಂದುಳಿದ ಸಮುದಾಯದ ಯುವಜನರು ಯಾವುದೇ ಶುಲ್ಕವಿಲ್ಲದೆ ಭಾಗವಹಿಸಬಹುದಾಗಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತರು 9148551840 ಅಥವಾ 8296468313 ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!