ಮೂರು ಖಾತೆಗಳನ್ನು ನಿಭಾಯಿಸುವಲ್ಲಿ ಹಾಲಿ ಸಚಿವರು ವಿಫಲ: ರಾಯರಡ್ಡಿ


ಕುಕನೂರು: ಯಲಬುರ್ಗಾ ಕ್ಷೇತ್ರದ ಹಾಲಿ ಶಾಸಕರು ಮೂರು ಖಾತೆಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಆರೋಪಿಸಿದರು.

ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಪಟ್ಟಣದ ತೇರಿನ ಗಡ್ಡಿ ಹತ್ತಿರ ಬುಧವಾರ ನೆಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಹಾಲಿ ಶಾಸಕರು ಮೂರು ಖಾತೆಗಳ ಸಚಿವರಾಗಿದ್ದರು ಸಹಿತ ಕ್ಷೇತ್ರಕ್ಕೆ ಒಂದು ಹೊಸ ಯೋಜನೆಯನ್ನು ತಂದಿಲ್ಲ. ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯಾದ ಕಾಮಗಾರಿಗೆ, ಕಟ್ಟಡಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಹಾಲಿ ಶಾಸಕರಿಗೆ ಆಗಿಲ್ಲ. ದೇಶದಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದರು ಸಹಿತ ದೇಶದ ಪ್ರಧಾನಿಗಳು ಮಾತ್ರ ಮಾತನಾಡುತ್ತಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ ಅವರು ಕೇವಲ ಜಾತಿ, ಧರ್ಮ ಮೂಲಕ ಸಮಾಜದಲ್ಲಿ ಶಾಂತಿ ಕದಡಿ ಬಿಜೆಪಿಯು ಸದಾ ಪ್ರಚಾರದಲ್ಲಿ ಇರಲು ಬಯಸುತ್ತಾರೆ ಎಂದು ಬಿಜೆಪಿ ಹಾಗೂ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನೆಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಕಾಸಿಮ್ ಸಾಬ ತಳಕಲ್ ,ವೀರನಗೌಡ ಪೊಲೀಸ್ ಪಾಟೀಲ್, ಯಾಂಕಣ್ಣ ಯರಾಶಿ ಹಾಗೂ ಗಗನ್ ನೋಟಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಪಾಟೀಲ, ವೀರನಗೌಡ ಪೊಲೀಸ್ ಪಾಟೀಲ, ಕಾಸಿಂ ಸಾಬ ತಳಕಲ್, ಮಂಜುನಾಥ ಕಡೆಮನಿ, ಬಿ.ಎಮ್. ಶಿರೂರು, ಸಿದ್ದಯ್ಯ ಕಳ್ಳಿಮಠ, ರಾಮಣ್ಣ ಭಜಂತ್ರಿ, ಮಲ್ಲಿಕಾರ್ಜುನ ಬಿನ್ನಾಳ, ಯಾಂಕಣ್ಣ ಯಾರಾಶಿ,ವೀರಯ್ಯ ತೋಂಟದಾರ್ಯಾಮಠ,ರೈಮಾನಸಾಬ ಮಾಕಪ್ಪನವರ, ನೂರುದ್ದೀನ್ ಗುಡಿಹಿಂಡಲ,ಸಿರಾಜ್ ಕರಮುಡಿ, ಗಗನ್ ನೋಟಗಾರ ಪ್ರಶಾಂತ್ ಅರಬೇರಳಿನ್,ಹಾಗೂ ಇತರರಿದ್ದರು.

Leave a Reply

error: Content is protected !!