BREAKING : ಕೊಪ್ಪಳಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿ : 2018ನೇ ಬ್ಯಾಚ್‌ನ IPS ಅಧಿಕಾರಿ ಸಾಹಿಲ್ ಬಗ್ಲಾ ನೇಮಕ!
PV NEWS ಕನ್ನಡ 24×7
ಕೊಪ್ಪಳ ಆ.29 : ಕರ್ನಾಟಕ ಕೇಡರ್‌ನ 2018ನೇ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ಸಾಹಿಲ್ ಬಗ್ಲಾ ಅವರನ್ನು ಕೊಪ್ಪಳ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (SP)ಯಾಗಿ ನೇಮಕ ಮಾಡಲಾಗಿದೆ.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ರಾಮ ಎಲ್. ಅರಸಿದ್ಧಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಸಾಹಿಲ್ ಬಗ್ಲಾ ಅವರನ್ನು ನೇಮಿಸಲಾಗಿದೆ.
2018ನೇ ಬ್ಯಾಚ್‌ನ IPS ಅಧಿಕಾರಿಯಾಗಿರುವ ಸಾಹಿಲ್ ಬಗ್ಲಾ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನೂತನ SP ಅವರ ನೇಮಕದೊಂದಿಗೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕ ಸುರಕ್ಷತೆ ವಿಚಾರಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಕ್ರಮಗಳ ನಿರೀಕ್ಷೆ ವ್ಯಕ್ತವಾಗಿದೆ.