You are currently viewing PV NEWS : ಶಾಂತಿ–ಸೌಹಾರ್ದತೆಗೆ ಆದ್ಯತೆ; ಅಭಿನಂದಿಸಲು ಬಂದ ಹಿರಿಯ ರೈತ ಮುಖಂಡರಿಗೆ ಪಿಎಸ್ಐ ರಾಠೋಡ್‌ರಿಂದ ಸನ್ಮಾನ!

PV NEWS : ಶಾಂತಿ–ಸೌಹಾರ್ದತೆಗೆ ಆದ್ಯತೆ; ಅಭಿನಂದಿಸಲು ಬಂದ ಹಿರಿಯ ರೈತ ಮುಖಂಡರಿಗೆ ಪಿಎಸ್ಐ ರಾಠೋಡ್‌ರಿಂದ ಸನ್ಮಾನ!

PV NEWS : ಶಾಂತಿ–ಸೌಹಾರ್ದತೆಗೆ ಆದ್ಯತೆ; ಅಭಿನಂದಿಸಲು ಬಂದ ಹಿರಿಯ ರೈತ ಮುಖಂಡರಿಗೆ ಪಿಎಸ್ಐ ರಾಠೋಡ್‌ರಿಂದ ಸನ್ಮಾನ!

PV NEWS ಕನ್ನಡ 24×7| 

ಕುಕನೂರು, ಅ. 08: ಕೊಪ್ಪಳ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ನೂತನ ಪೊಲೀಸ್ ಉಪನಿರೀಕ್ಷಕರಾಗಿ (ಪಿಎಸ್ಐ) ಮೌನೇಶ ರಾಠೋಡ್ ಅವರನ್ನು ಅಭಿನಂದಿಸಲು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಅವರು ಪೊಲೀಸ್ ಠಾಣೆಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಪಿಎಸ್ಐ ರಾಠೋಡ್ ಅವರು, ‘ನೀವು ನಮಗಿಂತ ಹಿರಿಯರು. ನಿಮ್ಮನ್ನು ನಾವೇ ಗೌರವಿಸಬೇಕು’ ಎಂದು ಹೇಳಿ ಅಂದಪ್ಪ ಕೋಳೂರ ಅವರನ್ನು ತಮ್ಮ ಕಚೇರಿಯಲ್ಲಿಯೇ ಸನ್ಮಾನಿಸಿ ಗೌರವಿಸಿದರು.

ಪಿಎಸ್ಐ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಬಳಿಕ ಮಾತನಾಡಿದ ರಾಠೋಡ್ ಅವರು, ‘ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳು ಅಥವಾ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ. ಕಾನೂನುಬದ್ಧವಾಗಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾವು ಸಾರ್ವಜನಿಕರ ಸೇವೆಗಾಗಿ ಇದ್ದೇವೆ. ಈ ನಿಟ್ಟಿನಲ್ಲಿ ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಹೇಳಿದರು.

ರೈತ ಮುಖಂಡರಾದ ದೇವರಡ್ಡಿ ನಾಗರಡ್ಡಿ, ಶರಣಪ್ಪ ಹನಸಿ, ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!