You are currently viewing BIG NEWS : ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ನಗದು ಪುರಸ್ಕಾರ ಹೆಚ್ಚಳ!

BIG NEWS : ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ನಗದು ಪುರಸ್ಕಾರ ಹೆಚ್ಚಳ!

BIG NEWS : ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭರ್ಜರಿ ನಗದು ಪುರಸ್ಕಾರ ಹೆಚ್ಚಳ!

ಚಿನ್ನಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ; ಸ್ಪರ್ಧಿಸಿದ 20 ಕ್ರೀಡಾಪಟುಗಳಿಗೂ ತಲಾ ₹5 ಲಕ್ಷ ಪ್ರೋತ್ಸಾಹಧನ

PV NEWS ಕನ್ನಡ 24×7| 

ಬೆಂಗಳೂರು, ಅ.9: ಏಷ್ಯನ್ ಗೇಮ್ಸ್–2026ರಲ್ಲಿ ಪದಕ ಗೆದ್ದು ದೇಶ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದ ರಾಜ್ಯದ ಕ್ರೀಡಾಪಟುಗಳನ್ನು ಕರ್ನಾಟಕ ಸರ್ಕಾರ ಸನ್ಮಾನಿಸಿ ಗೌರವಿಸಿದೆ. ಇದೇ ವೇಳೆ ಕ್ರೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುವ ನಗದು ಪುರಸ್ಕಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.

ಪದಕಗಳಿಗೆ ಭರ್ಜರಿ ಬಹುಮಾನ

ಸರ್ಕಾರದ ಪರಿಷ್ಕೃತ ನಗದು ಪುರಸ್ಕಾರದ ಪ್ರಕಾರ, ಚಿನ್ನದ ಪದಕ ವಿಜೇತರಿಗೆ ₹35 ಲಕ್ಷದಿಂದ ₹1 ಕೋಟಿಗೆ, ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷದಿಂದ ₹75 ಲಕ್ಷಕ್ಕೆ ಹಾಗೂ ಕಂಚಿನ ಪದಕ ವಿಜೇತರಿಗೆ ₹15 ಲಕ್ಷದಿಂದ ₹50 ಲಕ್ಷಕ್ಕೆ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ.

ಸ್ಪರ್ಧಿಸಿದ ಎಲ್ಲರಿಗೂ ಪ್ರೋತ್ಸಾಹಧನ

ಏಷ್ಯನ್ ಗೇಮ್ಸ್–2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ 20 ಮಂದಿ ಕ್ರೀಡಾಪಟುಗಳಿಗೂ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ. ಪದಕ ಗೆಲ್ಲದಿದ್ದರೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳ ಪ್ರಯತ್ನವನ್ನು ಗುರುತಿಸಿರುವುದು ಈ ನಿರ್ಧಾರದ ವಿಶೇಷತೆಯಾಗಿದೆ.

 

ಒಲಿಂಪಿಕ್ಸ್ ಸಿದ್ಧತೆಗೆ ತಲಾ ₹10 ಲಕ್ಷ

ಇದರೊಂದಿಗೆ ‘ಒಲಿಂಪಿಕ್ ಯೋಜನೆ 2026–27’ಕ್ಕೆ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್. ಹಾಗೂ ಶ್ರೇಯಾಂಕಾ ಆರ್. ಪಾಟೀಲ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಮುಂಬರುವ ಒಲಿಂಪಿಕ್ಸ್‌ಗೆ ಅಗತ್ಯವಿರುವ ತರಬೇತಿ ಹಾಗೂ ಸಿದ್ಧತೆಗಾಗಿ ಈ ನಾಲ್ವರು ಕ್ರೀಡಾಪಟುಗಳಿಗೆ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲು ಸರ್ಕಾರ ಘೋಷಿಸಿದೆ.

ರಾಜ್ಯದ ಕ್ರೀಡಾಪಟುಗಳ ಅಂತರರಾಷ್ಟ್ರೀಯ ಸಾಧನೆಯನ್ನು ಗುರುತಿಸಿ, ಮುಂದಿನ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಜಾಗತಿಕ ಕ್ರೀಡಾಕೂಟಗಳಿಗೆ ಉತ್ತಮ ತರಬೇತಿ, ಆರ್ಥಿಕ ನೆರವು ಹಾಗೂ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಉತ್ತೇಜನ ನೀಡುವ ನಿರೀಕ್ಷೆಯಿದೆ.

Prajavikshane

Chandru R Bhanapaur

Leave a Reply

error: Content is protected !!