You are currently viewing BREAKING : BIGG BOSS SEASON 12 : ಕನ್ನಡಿಗರ ಮನ ಗೆದ್ದು, ಕನ್ನಡ ಬಿಗ್ ಬಾಸ್ ವಿನ್ ಆದ ಗಿಲ್ಲಿ ನಟ.!

BREAKING : BIGG BOSS SEASON 12 : ಕನ್ನಡಿಗರ ಮನ ಗೆದ್ದು, ಕನ್ನಡ ಬಿಗ್ ಬಾಸ್ ವಿನ್ ಆದ ಗಿಲ್ಲಿ ನಟ.!

BREAKING : BIGG BOSS SEASON 12 : ಕನ್ನಡಿಗರ ಮನ ಗೆದ್ದು, ಕನ್ನಡ ಬಿಗ್ ಬಾಸ್ ವಿನ್ ಆದ ಗಿಲ್ಲಿ ನಟ.!

ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ :  ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ಅಲಿಯಾಸ್ ನಟರಾಜ್ ಜಯ ಗಳಿಸಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಕಿಚ್ಚ ಸುದೀಪ್ ವಿನ್ನರ್ ಘೋಷಣೆ ಮಾಡಿದರು.

ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದ್ದು, 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ಕರಾವಳಿ ಕುವರಿ ರಕ್ಷಿತಾಳಿಗೆ ರನ್ನರ್ ಅಪ್ ಸ್ಥಾನ ದೊರೆತಿದೆ.

 

ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್​ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು. ಅವರಿಗೆ ಈ ವಿಷಯದಲ್ಲಿ ತುಂಬಾನೇ ಬೇಸರ ಇತ್ತು. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿಯ ವಿನ್ನರ್ ಹನುಮಂತಗೆ 5 ಕೊಟಿ ವೋಟ್ ಪಡೆದಿದ್ದರು. ಇದಕ್ಕಿಂತ ಹತ್ತು ಪಟ್ಟು ವೋಟ್​​ನ ಗಿಲ್ಲಿ ನಟನಿಗೆ ಬಂದಿದೆ ಎಂಬುದು ವಿಶೇಷ. ಗಿಲ್ಲಿ ಕ್ರೇಜ್​​ಗೆ ವೋಟಿಂಗ್ ಲೈನ ಶೇಕ್ ಆಗಿದೆ. ಗಿಲ್ಲಿ ಫ್ಯಾನ್ಸ್ ಕ್ರೇಜ್ ಏನು ಎಂಬುದು ಗೊತ್ತಾಗಿದೆ.

Prajavikshane

Chandru R Bhanapaur

Leave a Reply

error: Content is protected !!