BIG NEWS : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎನ್.ಎಂ ಸುರೇಶ್ ಆಯ್ಕೆ!

You are currently viewing BIG NEWS : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎನ್.ಎಂ ಸುರೇಶ್ ಆಯ್ಕೆ!

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆ ನಡೆದಂತ ಚುನಾವಣೆಯಲ್ಲಿ 2023-24ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಎನ್.ಎಂ ಸುರೇಶ್ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಉಪಾಧ್ಯಕ್ಷರಾಗಿ ಪ್ರಮೀಳಾ, ವೆಂಕಟೇಶ್, ನರಸಿಂಹಲು ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಕ್ಲಿಕ್‌ ಮಾಡಿ…👇🏻

LOCAL EXPRESS : ಗುದ್ನೇಶ್ವರ ಮಠ ಜಮೀನು ಹೋರಾಟಕ್ಕೆ ಸ್ವಾಮೀಜಿಗಳು, ಪ ಪಂ ಬಿಜೆಪಿ ಸದಸ್ಯರ ಸಾಥ್…!

ನಿನ್ನೆ (ಶನಿವಾರ) ನಡೆದಂತ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಎಂ ಸುರೇಶ್, ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್ ಹಾಗೂ ಎ.ಗಣೇಶ್ ಸ್ಪರ್ಧಿಸಿದ್ದರು. ಅಂತಿಮವಾಗಿ ಎನ್.ಎಂ ಸುರೇಶ್ 337 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.

ಇದನ್ನು ಕ್ಲಿಕ್‌ ಮಾಡಿ…👇🏻

BREAKING NEWS : “ಕಾವೇರಿ ಉಳಿಸಿ, ಕಾಂಗ್ರೆಸ್ ಮನೆಗೆ ಕಳುಹಿಸಿ” : ಇಂದು ಬೃಹತ್ ಪ್ರತಿಭಟನೆ!

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಜೋಷಾಯಿ, ವಿತರಕರ ವಲಯದಿಂದ ಜಿ.ವೆಂಕಟೇಶ್, ಪ್ರದರ್ಶಕರ ವಲಯದಿಂದ ಎಂ.ನರಸಿಂಹಲು ಅವರು ಗೆಲುವು ಸಾಧಿಸಿದ್ದಾರೆ. ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕರ ವಲಯದಿಂದ ಭಾ.ಮ ಹರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಹಿರಿಯ ನಟ ಸುಂದರ್ ರಾಜು ಹಾಗೂ ಖಜಾಂಚಿಯಾಗಿ ಜಯಸಿಂಹ ಮುಸುರಿ ಅವರು ಆಯ್ಕೆಯಾಗಿದ್ದಾರೆ.

Leave a Reply

error: Content is protected !!